Advertisement

Kaikamba: ಉಳಾಯಿಬೆಟ್ಟು ಸೇತುವೆಯಲ್ಲಿ ಬಸ್‌ ನಿಷೇಧ; ಟಿಪ್ಪರ್‌ಗಿಲ್ಲ ತಡೆ!

03:00 PM Oct 16, 2024 | Team Udayavani |

ಕೈಕಂಬ: ಉಳಾಯಿಬೆಟ್ಟು, ಪೆರ್ಮಂಕಿ ಹಾಗೂ ಮಲ್ಲೂರು ಗ್ರಾಮಗಳ ಜನರಿಗೆ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಪರಾರಿ -ಉಳಾಯಿಬೆಟ್ಟು ರಸ್ತೆಯ ಮೇಲ್ಮನೆ ಬಳಿ ಕಿರುಸೇತುವೆಯಲ್ಲಿ ಘನವಾಹನಕ್ಕೆ ನಿಷೇಧದಿಂದಾಗಿ ಅಲ್ಲಿನ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಈಗ ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ.

Advertisement

ಉಳಾಯಿಬೆಟ್ಟು ಮೇಲ್ಮನೆ ಬಳಿ ಇರುವ ಸೇತುವೆ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು. ಮಂಗಳೂರು, ವಾಮಂಜೂರು, ಗುರುಪುರ ಪ್ರದೇಶಗಳಿಗೆ ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು ಗ್ರಾಮಸ್ಥರಿಗೆ ಪ್ರಮುಖ ರಸ್ತೆ ಹಾಗೂ ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರು ಘನ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಮಾಡಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಪ್ರದೇಶಗಳಿಂದ ದಿನನಿತ್ಯ ಈ ಕಿರು ಸೇತುವೆ ಇರುವ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಕೆಲಸಕ್ಕಾಗಿ, ಸಾರ್ವಜನಿಕರು ನಗರ ಪ್ರದೇಶಕ್ಕೆ ಬಸ್ಸಿನಲ್ಲಿ ಬರುತ್ತಿದ್ದರು. ಈಗ ಬಸ್‌ ವ್ಯವಸ್ಥೆ ಇಲ್ಲದೆ ತೊಂದರೆ ಹಾಗೂ ಸಮಸ್ಯೆಯಾಗಿದೆ. ಬಸ್‌ ನಿಷೇಧದಿಂದಾಗಿ ಅವರು ದಿನನಿತ್ಯ ರಿಕ್ಷಾಕ್ಕೆ 150- 200 ರೂ. ನೀಡಬೇಕಾಗಿ ಬಂದಿದೆ. ಶಾಲಾ ಮಕ್ಕಳಿಗೆ ಅದು ಭಾರಿ ದುಬಾರಿಯಾದರೆ, ಕೂಲಿ ಕಾರ್ಮಿಕರಿಗೆ ದಿನ ಸಿಗುವ ಕೂಲಿ ವೇತನವನ್ನು ಪೂರ್ಣವಾಗಿ ರಿಕ್ಷಾ ಬಾಡಿಗೆಯಾಗಿ ನೀಡಬೇಕಾಗಿ ಬಂದಿದೆ.

ಬದಲಿ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ
ಈ ಕಿರು ಸೇತುವೆಯ ಸಮೀಪದಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡಲು ಅವಕಾಶವಿದೆ. ಇಲ್ಲಿ ಶಾಶ್ವತ ಕಿರುಸೇತುವೆ ಅಥವಾ ಮೋರಿ ಹಾಕಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬಹುದಿತ್ತು.

ಮಳೆ ಬಂದಾಗ ಮಾತ್ರ ಇಲ್ಲಿ ಹೆಚ್ಚು ನೀರು ಬರುವ ಕಾರಣ ಪರ್ಯಾಯ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲು ಹೆಚ್ಚು ಅನುಕೂಲಕರವಾಗಿದೆ.

Advertisement

ವಾಹನ ಸಂಚಾರಕ್ಕೆ ಶೀಘ್ರ ಬದಲಿಯಾಗಿ ಮೋರಿ ಇಲ್ಲವೇ ಕಿರು ಸೇತುವೆ ಮಾಡಿ ಎಂದು ಆಗ್ರಹಿಸಿರುವ ಜನರು, ಬೇಡಿಕೆಗೆ ಕಿವಿಗೊಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

12 ಸ್ಕೂಲ್‌ ಬಸ್‌ ಬರುತ್ತಿತ್ತು
ಈ ಕಿರುಸೇತುವೆ ದಾಟಿ ಊರಿಗೆ 12 ಶಾಲಾ ಬಸ್‌ಗಳು ಬರುತ್ತಿದ್ದವು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದವು. ಅಲ್ಲದೆ 3 ಖಾಸಗಿ ಬಸ್‌ ಹಾಗೂ 2 ಸರಕಾರಿ ಬಸ್‌ ಮಂಗಳೂರಿಗೆ ಪ್ರತಿನಿತ್ಯ ಪ್ರಯಾಣಿಸುತ್ತಿದ್ದವು. ಈಗ ಬೇರೆ ವಾಹನಗಳನ್ನು ನಂಬಿ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಘನ ವಾಹನಗಳಿಗೆ ನಿಷೇಧವಿದ್ದರೂ ಮರಳು, ಮಣ್ಣು, ಕೆಂಪು ಕಲ್ಲು, ಕಪ್ಪು ಕಲ್ಲು, ಜಲ್ಲಿಕಲ್ಲು ಸಾಗಿಸುವ ಎರಡು ಯುನಿಟಿನ ಟಿಪ್ಪರ್‌ಗಳು ಈ ಕಿರುಸೇತುವೆಯಲ್ಲಿ ದಿನನಿತ್ಯ ಸಾಗುತ್ತಿವೆ! ಬಸ್‌ಗಳಿಗೆ ಮಾತ್ರ ನಿಷೇಧ ಮಾಡಲಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next