Advertisement

ಮಲೆನಾಡಲ್ಲೀಗ ಮಹಾಮಾರಿ ಮಂಗನ ಕಾಯಿಲೆ ಭೀತಿ

12:30 AM Jan 04, 2019 | Team Udayavani |

ಶಿವಮೊಗ್ಗ: ಮಲೆನಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಹಾಮಾರಿ ಮಂಗನ ಕಾಯಿಲೆ ಈ ಬಾರಿ ಅವಧಿಗೂ ಮುನ್ನವೇ
ಮಲೆನಾಡನ್ನು ಅಮರಿಕೊಂಡಿದೆ. ಈಗಾಗಲೇ ಈ ಮಹಾಮಾರಿಗೆ ನಾಲ್ವರು ಬಲಿಯಾಗಿದ್ದು,ಹತ್ತಾರು ಮಂದಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ದಿಷ್ಟ ಔಷಧ ಇರದ ಈ ಕಾಯಿಲೆ ಬೇಸಿಗೆ ಬರುತ್ತಿದ್ದಂತೆ ಉಲ½ಣಗೊಳ್ಳುವ ಕಾರಣ ಮಲೆನಾಡಿಗರು
ಆತಂಕಕ್ಕೊಳಗಾಗಿದ್ದಾರೆ.

Advertisement

ಬೇಸಿಗೆ ಬಂತೆಂದರೆ ಸಾಕು, ತೀರ್ಥಹಳ್ಳಿ ತಾಲೂಕಿನ ಜನ ಇಷ್ಟು ವರ್ಷ ಜೀವಭಯದಲ್ಲೇ ದಿನ ದೂಡುತ್ತಿದ್ದರು. ಇದಕ್ಕೆ ಕಾರಣ ಮಂಗನ ಕಾಯಿಲೆ ಎಂಬ ಮಹಾಮಾರಿ. ಈ ರೋಗ ಬಂತೆಂದರೆ ಸಾಕು ಬದುಕೋದೇ ಕಷ್ಟ. ಒಂದು ವೇಳೆ ಬದುಕಿದರೂ ಒಂದು ವರ್ಷಗಳ ಕಾಲ ಸುಧಾರಿಸಿಕೊಳ್ಳಬೇಕು. ಹೀಗಾಗಿಯೇ ತೀರ್ಥಹಳ್ಳಿ ತಾಲೂಕಿನ ಜನರಿಗೆ ಡಿಸೆಂಬರ್‌ ವೇಳೆಗಾಗಲೇ ಮಂಗನ ಕಾಯಿಲೆ ಬಾರದಂತೆ ಲಸಿಕೆ ಹಾಕಲಾಗುತ್ತದೆ.

ಕೈ ಕಾಲುಗಳಿಗೆ ಹಚ್ಚಿಕೊಳ್ಳಲು ಡಿಎಂಪಿ ಎಣ್ಣೆಯನ್ನು ನೀಡಲಾಗುತ್ತದೆ. ಇಷ್ಟು ವರ್ಷಗಳ ಕಾಲ ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ರೋಗ ಈ ಬಾರಿ ಸಾಗರಕ್ಕೂ ವ್ಯಾಪಿಸಿದೆ. ಈಗಾಗಲೇ ಸಾಗರ ತಾಲೂಕು ಅರಲಗೋಡು ಗ್ರಾಪಂ ವ್ಯಾಪ್ತಿಯ ನಾಲ್ವರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಆದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಮಂಗನ ಕಾಯಿಲೆಯಿಂದ
ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ.

ಸಾಗರ ತಾಲೂಕಿನ ಅರಲಗೋಡು ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಲವರಿಗೆ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿತು. ಹವಾಮಾನ ವೈಪರೀತ್ಯದಿಂದ ಜ್ವರ ಬಂದಿರಬಹುದು ಎಂದು ಚಿಕಿತ್ಸೆ ಪಡೆದರೂ ಜ್ವರ ಕಡಿಮೆಯಾಗದಿದ್ದಾಗ ರೋಗಿಗಳ ರಕ್ತ ಪರೀಕ್ಷೆ ಮಾಡಿಸಲಾಯಿತು. ಆಗ ಮಂಗನ ಕಾಯಿಲೆಯ ವೈರಾಣು ಇರುವುದು ಪತ್ತೆಯಾಯಿತು. ಅರಲಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಈ ರೋಗ ಏಕಾಏಕಿ ಕಾಣಿಸಿಕೊಂಡಿದ್ದರಿಂದ ಜನ ಆತಂಕಕ್ಕೊಳಗಾದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ಗ್ರಾಪಂ ವ್ಯಾಪ್ತಿಯ ಮಂಡವಳ್ಳಿಯ ಪಾರ್ಶ್ವನಾಥ ಜೈನ್‌, ವಾಟೆಮಕ್ಕಿಯ ಕೃಷ್ಣಪ್ಪ, ಕಂಚಿಕೈ ಗ್ರಾಮದ ಯುವಕ ಮಂಜುನಾಥ್‌ ಮೃತಪಟ್ಟರು. ಹತ್ತಾರು ಮಂದಿ ಚಿಕಿತ್ಸೆಗಾಗಿ ಶಿವಮೊಗ್ಗ, ಮಣಿಪಾಲ,ಮಂಗಳೂರು ಆಸ್ಪತ್ರೆಗಳಿಗೂ ದಾಖಲಾದರು. ಆದರೆ, ಗುರುವಾರ ಬೆಳಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದ ಮರಬಿಡಿ ಗ್ರಾಮದ ಯುವಕ ಲೋಕರಾಜ್‌ ಜೈನ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಪತ್ತೆಯಾಗದ ಮೂಲ: ಉಣ್ಣೆಗಳ ಕಡಿತದಿಂದ ಹರಡುವ ಈ ಕಾಯಿಲೆ ಡಿಸೆಂಬರ್‌ನಿಂದ ಏಪ್ರಿಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಯೌವ್ವನಾವಸ್ಥೆಯಲ್ಲಿ ಇರುವ ಉಣ್ಣೆಗಳು ಮಂಗಗಳು ಅಥವಾ ಮನುಷ್ಯರಿಗೆ ಕಚ್ಚಿ ವೈರಸ್‌ ಹರಡುತ್ತಿದೆ. ಈ ವೈರಸ್‌ ಎಲ್ಲಿಂದ ಬಂತು ಎಂಬುದು ಈವರೆಗೂ ಪತ್ತೆಯಾಗಿಲ್ಲ.ಪಕ್ಷಿಗಳ ಮೂಲಕ ಬೇರೆ ದೇಶಗಳಿಂದ ಹರಡಿತು ಎಂದು ಹೇಳಲಾಗುತ್ತಿದೆಯಾದರೂ ಯಾವುದೇ ಪುರಾವೆ ಲಭ್ಯವಿಲ್ಲ.

Advertisement

32 ಮಂಗಗಳ ಸಾವು
ಕಳೆದ ಒಂದು ತಿಂಗಳಲ್ಲಿ ಅರಲಗೋಡು ಅರಣ್ಯ ಪ್ರದೇಶದಲ್ಲಿ 29 ಹಾಗೂ ಕೆಸರುಮಕ್ಕಿ ವ್ಯಾಪ್ತಿಯಲ್ಲಿ 3 ಮಂಗಗಳು ಸಾವನ್ನಪ್ಪಿವೆ. ಪ್ರತಿ ಬಾರಿ ಜನವರಿ ನಂತರ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ, ಈ ಬಾರಿ ಡಿಸೆಂಬರ್‌ನಲ್ಲೇ ಉಲ½ಣಗೊಂಡಿದ್ದು ಮಲೆನಾಡಿನ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಕಾಯಿಲೆ ಕಾಡಿಸಿಕೊಂಡಿರುವ ಅರಲಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಜ್ವರದ ಶಂಕೆ ಇರುವ 50ಕ್ಕೂ ಹೆಚ್ಚು ಮಂದಿಯ ರಕ್ತದ ಮಾದರಿಯನ್ನು ಲ್ಯಾಬ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 20 ಮಂದಿಯ ರಿಸಲ್ಟ್ ಬಂದಿದ್ದು, ಅದರಲ್ಲಿ 10 ಪಾಸಿಟಿವ್‌ ಎಂದು ಗುರುತಿಸಲಾಗಿದೆ.ಮೃತಪಟ್ಟ ನಾಲ್ವರಲ್ಲಿ ಪಾರ್ಶ್ವನಾಥ್‌ ಎಂಬುವರಿಗೆ ಕೆಎಫ್‌ಡಿ ಇದ್ದ ಬಗ್ಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ದೃಢಪಟ್ಟಿದೆ. ಕೃಷ್ಣಪ್ಪ ಎಂಬುವರು ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆದಿದ್ದರಿಂದ ಅವರ ರಕ್ತದ ಮಾದರಿ ಸಿಕ್ಕಿಲ್ಲ. ಇಬ್ಬರ ರಕ್ತದ ಮಾದರಿಯ ವರದಿ ಬರಬೇಕಿದೆ. ಅರಲಗೋಡು ಗ್ರಾಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ವೈದ್ಯರ ತಂಡ ಸರ್ವೇ ನಡೆಸುತ್ತಿದ್ದಾರೆ.
– ಡಾ| ರವಿಕುಮಾರ್‌,ಕೆಎಫ್‌ಡಿ ಉಪ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next