Advertisement

ಮಲ್ಯ ಅರ್ಜಿ ಆ.20ಕ್ಕೆ ವಿಚಾರಣೆ

08:19 AM Aug 07, 2020 | mahesh |

ಹೊಸದಿಲ್ಲಿ: ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಆದೇಶದ ಮರು ಪರಿಶೀಲನೆ ಕೋರಿ ಉದ್ಯಮಿ ವಿಜಯ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆ.20ಕ್ಕೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಲ್ಯ ಅವರು 300 ಕೋಟಿ ರೂ.ಗಳನ್ನು ತಮ್ಮ ಮಕ್ಕಳ ಖಾತೆಗೆ ವರ್ಗಾಯಿಸಿದ್ದರು. ಈ ಹಿನ್ನೆಲೆಯಲ್ಲಿ 2017ರ ಮೇ 9ರಂದು ಸುಪ್ರೀಂ ಕೋರ್ಟ್‌ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಆದೇಶ ಹೊರಡಿಸಿತ್ತು.

Advertisement

ಈ ಆದೇಶ ಮರುಪರಿಶೀಲಿಸುವಂತೆ ಕೋರಿ ಮಲ್ಯ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಾಲಯದ ರಿಜಿಸ್ಟ್ರಿಯು ವಿಚಾರಣೆಗೆ ಲಿಸ್ಟ್‌ ಮಾಡಿರಲಿಲ್ಲ. ಈ ಕುರಿತು ಕಳೆದ ಜೂನ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಪೀಠ, ಮಲ್ಯ ಅವರ ಅರ್ಜಿಯನ್ನು 3 ವರ್ಷಗಳ ಕಾಲ ವಿಚಾರಣೆಗೆ ಲಿಸ್ಟ್‌ ಮಾಡದೇ ವಿಳಂಬ ಮಾಡಿದ್ದೇಕೆ ಎಂದು ವಿವರಿಸುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿತ್ತು. ಗುರುವಾರ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಆ.20ಕ್ಕೆ ಮುಂದೂಡಿದೆ.

ಆ್ಯಂಬುಲೆನ್ಸ್‌ ಚಾಲಕಿಯಾದ ಮಹಿಳೆ!
ಕಲ್ಲಿಕೋಟೆ: ಕೇರಳದಲ್ಲಿ ಕೋವಿಡ್ ಬಿಕ್ಕಟ್ಟಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯೊಬ್ಬರು ಕೆಲಸವಿಲ್ಲದ ಕಾರಣ ಆ್ಯಂಬುಲೆನ್ಸ್‌ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಲ್ಲಿಕೋಟೆಯ ದೀಪಾ ಜೋಸೆಫ್ ಎಂಬಾಕೆ ಕಾಲೇಜ್‌ವೊಂದರಲ್ಲಿ ಬಸ್‌ ಚಾಲಕಿಯಾಗಿದ್ದರು. ಇದೀಗ ಶಾಲಾ ಕಾಲೇಜುಗಳು ಸ್ಥಗಿತಗೊಂಡಿವೆ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಉದ್ಯೋಗ ಕೂಡ ಸಿಗುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ಆ್ಯಂಬುಲೆನ್ಸ್‌ ಚಾಲಕಿಯಾಗಿದ್ದಾರೆ. ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಪತಿ ಇದ್ದಾರೆ. ಮಗ 10ನೇ ಹಾಗೂ ಮಗಳು 8ನೇ ತರಗತಿ ಓದುತ್ತಿದ್ದಾಳೆ. ನನ್ನ ಕೆಲಸಕ್ಕೆ ಕುಟುಂಬದವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ದೀಪಾ ಜೋಸೆಫ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next