Advertisement

ಮಲ್ಲಿಕಟ್ಟೆ: ಕಾರು ಚಾಲಕನ ನಿರ್ಲಕ್ಷ್ಯ- ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ; ಬಾಲಕಿಗೆ ಗಾಯ

10:12 PM Aug 03, 2023 | Team Udayavani |

ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಬಳಿ ಗುರುವಾರ ಬೆಳಗ್ಗೆ ಕಾರೊಂದು ಚಾಲಕನ ನಿರ್ಲಕ್ಷéದಿಂದ ಟೆಂಪೋ, ನಿಲ್ಲಿಸಿದ್ದ ದ್ವಿಚಕ್ರ ವಾಹನ ಮತ್ತು ಕಾರಿಗೆ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಪಾದಚಾರಿ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.

Advertisement

ಬೆಳಗ್ಗೆ 11 ಗಂಟೆಯ ವೇಳೆಗೆ ಘಟನೆ ನಡೆದಿದೆ. ಇಲ್ಲಿನ ಆಭರಣ ಜುವೆಲರ್ ಬಳಿಯ ಜಂಕ್ಷನ್‌ನಿಂದ ಮಲ್ಲಿಕಟ್ಟೆ ಕಡೆಗೆ ಸಾಗುವ ಇಳಿಜಾರು ರಸ್ತೆಯಲ್ಲಿ ವ್ಯಾಗನಾರ್‌ ಕಾರನ್ನು ಚಾಲಕ ಪೌಲ್‌ ಜೋಸೆಫ್‌ ರಸ್ಕಿನ್ಹಾ ನಿರ್ಲಕ್ಷéದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ಮುಂಭಾಗದಲ್ಲಿ ಹೋಗುತ್ತಿದ್ದ ಟೆಂಪೋವೊಂದರ ಎಡ ಭಾಗಕ್ಕೆ ಢಿಕ್ಕಿ ಹೊಡೆಸಿದ್ದ. ಢಿಕ್ಕಿಯ ರಭಸಕ್ಕೆ ಬಲಕ್ಕೆ ಚಲಿಸಿದ ಟೆಂಪೋ ಪಾಲಿಕೆ ವಾಣಿಜ್ಯ ಸಂಕೀರ್ಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ ಮತ್ತು ಆಮ್ನಿ ಕಾರಿಗೆ ಢಿಕ್ಕಿಯಾಗಿದೆ.

ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಕಮಲಾಕ್ಷಿ (16) ಎನ್ನುವ ಬಾಲಕಿಗೆ ಕಾರು ಢಿಕ್ಕಿಯಾಗಿದ್ದು, ಮುಂದಕ್ಕೆ ಸಾಗಿದ ಕಾರು ಮಲ್ಲಿಕಟ್ಟೆ ಕಡೆಗೆ ಸಾಗುತ್ತಿದ್ದ ಸ್ವಿಫ್ಟ್‌ ಕಾರಿಗೆ ಢಿಕ್ಕಿಯಾಗಿ ನಿಂತಿದೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next