Advertisement

ಕಾಂಗ್ರೆಸ್ ಗೆಲುವು ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗ: ಮಲ್ಲಿಕಾರ್ಜುನಾಗಪ್ಪ 

11:43 AM Dec 15, 2021 | Team Udayavani |

ಗಂಗಾವತಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಭಯ್ಯಾಪುರ ಅವರ ಗೆಲುವು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ . ಸ್ಥಳೀಯ ಸರ್ಕಾರಗಳಿಗೆ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿರುವುದು ಅನುದಾನ ನೀಡದೇ ಇರುವುದು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ಮಾಜಿ ಸಚಿವ ರಾಯಚೂರು ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನಾಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Advertisement

ಗ್ರಾಪಂ ಹಾಗೂ ನಗರ ಸಭೆಯಲ್ಲಿ ಅತಿಹೆಚ್ಚು ಎಸ್ಸಿ ಎಸ್ಟಿ ಹಿಂದುಳಿದ ವರ್ಗದ ಸದಸ್ಯರಿದ್ದು ಬಹುತೇಕ ಅವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದರು.

ಗ್ರಾಮೀಣ ಮಟ್ಟದ ಆಡಳಿತಕ್ಕೆ ಸರಕಾರ ನಿರ್ಲಕ್ಷ್ಯ ತೋರಿದೆ ಬಡವರಿಗೆ ಮನೆಗಳನ್ನು ನೀಡಿಲ್ಲ ರಸ್ತೆ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ನಿರ್ಲಕ್ಷ್ಯದ ಫಲವೇ ಈ ಫಲಿತಾಂಶವಾಗಿದೆ .2023ರ ಚುನಾವಣೆಯ ದಿಕ್ಸೂಚಿಯಾಗಿಯೂ ವಿಧಾನ ಪರಿಷತ್ ಫಲಿತಾಂಶ ಹೊರಹೊಮ್ಮಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next