Advertisement

ಮಾದಿಗರು ಬಿಜೆಪಿಗೆ ಸೀಮಿತರಲ್ಲ: ಮಲ್ಲಿಕಾರ್ಜುನ ಸೈದಾಪೂರ

12:18 PM Jun 11, 2022 | Team Udayavani |

ವಾಡಿ: ಮಾದಿಗರು ಕೇವಲ ಬಿಜೆಪಿ ಪಕ್ಷಕ್ಕೆ ಸೀಮಿತವಾಗಿಲ್ಲ. ಜಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿಟ್ಟಿರುವ ಕಾಂಗ್ರೆಸ್ ಪಕ್ಷದಲ್ಲೂ ಅಸಂಖ್ಯಾತ ಮಾದಿಗರಿದ್ದಾರೆ. ಆದರೆ ನಾಲವಾರದಲ್ಲಿ ರವಿವಾರ ನಡೆಯುತ್ತಿರುವ ಮಾದಿಗರ ಸಮಾವೇಶ ಕೇವಲ ಬಿಜೆಪಿ ಮಾದಿಗರ ಸಮಾವೇಶವಾಗಿ ನಡೆಯುತ್ತಿದೆ ಎಂದು ವಾಡಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸೈದಾಪೂರ ಆರೋಪಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಾಲವಾರದಲ್ಲಿ ಆಯೋಜಿಸಿರುವ ಮಾದಿಗರ ತಾಲೂಕು ಮಟ್ಟದ ಸಮಾವೇಶವನ್ನು ಖಂಡಿಸಿದ್ದಾರೆ. ಮಾದಿಗರು ಎಂದರೆ ಅವರೆಲ್ಲರೂ ಒಂದೆ ಸಮುದಾಯ ಎಂದು ಗುರುತಿಸಬೇಕು. ಅವರನ್ನು ಬಿಜೆಪಿ-ಕಾಂಗ್ರೆಸ್ ಎಂದು ಒಡೆದು ರಾಜಕಾರಣ ಮಾಡುವುದು ನೀಚ ರಾಜಕೀಯ ಎನ್ನಿಸಿಕೊಳ್ಳುತ್ತದೆ. ನಾಲವಾರದಲ್ಲಿ ಏರ್ಪಡಿಸಲಾಗಿರುವ  ಮಾದಿಗರ ಸಮಾವೇಶಕ್ಕೆ ಕೇವಲ ಬಿಜೆಪಿಯ ನಾಯಕರುಗಳು, ಶಾಸಕರು, ಸಚಿವರು ಅತಿಥಿಗಳಾಗಿದ್ದಾರೆ. ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಸೌಜನ್ಯಕ್ಕಾದರೂ ಆಹ್ವಾನಿಸಿಲ್ಲ.  ಕಾಂಗ್ರೆಸ್ ಪಕ್ಷದಲ್ಲಿರುವ ಮಾದಿಗ ಮುಖಂಡರನ್ನೂ ಕಡೆಗಣಿಸಿರುವುದು ನೋಡಿದರೆ ಇದು ಸ್ವಾಭಿಮಾನಿ ಮಾದಿಗರ ಸಮಾವೇಶವಲ್ಲ. ಬಿಜೆಪಿಯ ಮಾದಿಗರ ಸಮಾವೇಶ ಎಂಬುದು ಗೊತ್ತಾಗುತ್ತದೆ. ಅಲ್ಲದೆ ಈ ಸಮಾವೇಶ ದ್ವೇಷ ರಾಜಕಾರಣದ ಪ್ರತೀಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾವೇಶದ ಹೆಸರಿನಲ್ಲಿ ಮಾದಿಗರ ಒಗ್ಗಟ್ಟು ಒಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿಗರ ಕುತಂತ್ರಕ್ಕೆ ಎಚ್ಚೆತ್ತ ಮಾದಿಗ ಸಮುದಾಯ ಬಲಿಯಾಗುವುದಿಲ್ಲ. ಮತ್ತು ನಾಲವಾರದಲ್ಲಿ ನಡೆಯುತ್ತಿರುವ ಮಾದಿಗರ ಸಮಾವೇಶ ರಾಜಕೀಯ ಪ್ರೇರಿತವಾಗಿದ್ದು, ಅಭಿವೃದ್ಧಿ ಪರ ಚಿಂತಕ ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಎತ್ತಿಕಟ್ಟುವ ದುರಾಲೋಚನೆಯಿಂದ ಕೂಡಿದೆ. ಇಂಥಹ ಒಡೆದಾಳುವ ಕಾರ್ಯಮಗಳಲ್ಲಿ ಮಾದಿಗರು ಯಾರೂ ಭಾಗವಹಿಸಬಾರದು ಎಂದು ಮಲ್ಲಿಕಾರ್ಜುನ ಸೈದಾಪೂರ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next