ಹೊಸದಿಲ್ಲಿ: ಬುಧವಾರದ ರಾಜ್ಯಸಭೆ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಉಡುಗೆಯ ಬಗ್ಗೆ ವಿಶೇಷ ಚರ್ಚೆ ನಡೆದಿದೆ. ಅದಕ್ಕೆ ಕಾರಣ ಪ್ರಧಾನಿ ಮೋದಿ ಧರಿಸಿದ್ದ ಮರುಬಳಕೆಯ ಪ್ಲಾಸ್ಟಿಕ್ ನಿಂದ ಮಾಡಲಾದ ಜಾಕೆಟ್ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಧರಿಸಿದ್ದ 56,332 ರೂ ಮೌಲ್ಯದ ಶಾಲು.
ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ 56,332 ರೂ.ಗಳ ಮೌಲ್ಯದ ಲೂಯಿಸ್ ವಿಟಾನ್ ಬ್ರ್ಯಾಂಡ್ ನ ಶಾಲು ಧರಿಸಿದ್ದರು. ಈ ವಿಚಾರ ಬಿಜೆಪಿಗರಿಂದ ಟೀಕೆಗೆ ಗುರಿಯಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಶೆಹಜಾದ್ ಪೂನಾವಾಲಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅನುಸರಿಸುವ ಆಯ್ಕೆಯೊಂದು, ಬೋಧನೆಯೊಂದು ಎಂದು ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ:ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ
ಅಲ್ಲದೆ, ಖರ್ಗೆ ಅವರ ಫೋಟೋ ಹಾಗೂ ಮೋದಿ ಅವರ ಫೋಟೋಗಳನ್ನು ಹೋಲಿಕೆ ಮಾಡಿದ್ದಾರೆ. ಮೋದಿ ಅವರು ಧರಿಸಿದ್ದ ವೇಸ್‌ಕೋಟ್ ಮರುಬಳಕೆ ಪ್ಲಾಸಿಕ್‌ನಿಂದ ತಯಾರಿಸಲಾಗಿದೆ ಇದು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿಯ ಸೂಚಕದ ಫ್ಯಾಶನ್. ಅದೇ ಖರ್ಗೆ ಅವರ ಶಾಲು? ಈ ಬಗ್ಗೆ ಏನು ಹೇಳಲಾಗುವುದಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಪ್ಲಾಸ್ಟಿಕ್‌ನಿಂದ ಸಿದ್ಧಪಡಿಸಿದ ಜ್ಯಾಕೆಟ್ ಧರಿಸಿದ್ದ ಮೋದಿ: ಬುಧವಾರ ರಾಜ್ಯಸಭಾ ಕಲಾಪದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮರುಬಳಕೆ ಮಾಡಲ್ಪಟ್ಟ ಪ್ಲಾಸ್ಟಿಕ್‌ನಿಂದ ತಯಾರಿಸಿದ ಜಾಕೆಟ್ ಧರಿಸಿದ್ದರು! ಬೆಂಗಳೂರಿನಲ್ಲಿ ಸೋಮವಾರ ಭಾರತ ಇಂಧನ ಸಪ್ತಾಹವನ್ನು ಮೋದಿ ಉದ್ಘಾಟಿಸಿದ್ದರು. ಆಗ ಅವರು, ಐಒಸಿ ತನ್ನ “ಅನ್ ಬಾಟಲ್ಡ್’ ಎಂಬ ಯೋಜನೆಯಡಿ ಸಿದ್ಧಪಡಿಸಿದ್ಧ ಸಮವಸ್ತ್ರಗಳನ್ನೂ ಬಿಡುಗಡೆ ಮಾಡಿದ್ದರು. ಏಕಬಳಕೆಯ ಪ್ಲಾಸ್ಟಿಕ್ಕನ್ನು ಇಲ್ಲ ಮಾಡಬೇಕೆಂದು ಪ್ರಧಾನಿ ಕರೆ ನೀಡಿದ್ದರಿಂದಲೇ ಇವನ್ನು ಸಿದ್ಧಪಡಿಸಲಾಗಿದೆ. ಐಒಸಿ ತನ್ನ ಕೇಂದ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಎಲ್‌ಪಿಜಿ ಸಿಲಿಂಡರ್ ಗಳನ್ನು ಮನೆಗಳಿಗೆ ತಲುಪಿಸುವ ಸಿಬ್ಬಂದಿಗೆ ಇದೇ ಸಮವಸ್ತ್ರಗಳನ್ನು ನೀಡುತ್ತಿದೆ. ಈ ಸಮವಸ್ತ್ರಗಳನ್ನು ನವೀಕರಿಸಬಹು ದಾದ ಪ್ಲಾಸ್ಟಿಕ್ ಬಾಟಲ್‌ಗಳು, ಹತ್ತಿಯಿಂದ ತಯಾರಿಸಲಾಗಿದೆ.