Advertisement

ನ್ಯಾಯಾಂಗ ಸಾಕ್ಷಿ ಪರಿಗಣಿಸದೆ ಬಾಬರಿ ಮಸೀದಿ ತೀರ್ಪುನೀಡಿದ್ದು ಸರಿಕಾಣುತ್ತಿಲ್ಲ: ಖರ್ಗೆ ಬೇಸರ

04:23 PM Oct 01, 2020 | keerthan |

ಬೆಂಗಳೂರು: ಬಾಬರಿ ಮಸೀದಿ ಧ್ವಂಸದ ಅನೇಕ ಸಾಕ್ಷಿಗಳನ್ನ ಜನ ನೋಡಿದ್ದಾರೆ. 1992 ಡಿಸೆಂಬರ್ ಆರರ ಘಟನೆ ಎಲ್ಲರೂ ನೋಡಿದ್ದಾರೆ. ಯಾರು ‌ಮೇಲೆ‌ ಹತ್ತಿದ್ದರು, ಯಾರು‌ ಕೂತಿದ್ದರು ಎಲ್ಲವೂ ಗೊತ್ತಿದೆ. ವಿಶ್ವದ ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ರೂಪದ ವರದಿಯಾಗಿದೆ. ಆದರೆ ವಿಶೇಷ ಸಾಕ್ಷಿ ಇಲ್ಲವೆಂದು ಸಿಬಿಐ ಕೋರ್ಟ್ ಖುಲಾಸೆ ಮಾಡಿದೆ. ಇದು ನಮ್ಮೆಲ್ಲರಿಗೆ ಬೇಸರ ತರುವ ಸಂಗತಿ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗ ಕೂಡ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿಕಾಣುತ್ತಿಲ್ಲ. ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೋಗುತ್ತದೆ. ಕಾರ್ಯಾಂಗ, ನ್ಯಾಯಾಂಗ ಎರಡೂ ಬೇರೆ ಬೇರೆ. ಬಡಜನರಿಗೆ ಸಿಗುವ ತೀರ್ಪು, ಶಿಕ್ಷೆ ಮೊಟಕಾಗಿದೆ, ಇದರಲ್ಲಿ ಪಾರದರ್ಶಕತೆ ಇಲ್ಲ ಎನ್ನುತ್ತಿದ್ದಾರೆ ಎಂದರು.

ಇದನ್ನೂ ಓದಿ:ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸರ್ಪ್ರೈಸ್ ಅಭ್ಯರ್ಥಿ? ಮಲ್ಲಿಕಾರ್ಜುನ ಖರ್ಗೆ ಸುಳಿವು

ಪ್ರಕರಣಕ್ಕೆ ಬಿಜೆಪಿಯವರೇ ಇದಕ್ಕೆ ಕುಮ್ಮಕ್ಕು‌ಕೊಟ್ಟಿದ್ದರು. ಕರಸೇವಕರು ಎಲ್ಲಿಂದ ಬಂದರು? ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು? ಕರಸೇವಕರು ಅಲ್ಲಿ ಏಕಾಏಕಿ‌ ಹೋಗಲು ಸಾಧ್ಯವೇ? ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ. ಹಾಗಾದರೆ ಬಾಬರಿ ಮಸೀದಿ ಹೊಡೆದಿದ್ದು ಯಾರು? ಎಂದು ಖರ್ಗೆ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next