Advertisement

ಪಿಎಸಿಗೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ

10:54 AM May 03, 2017 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು 21 ಸದಸ್ಯ ಬಲದ ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದಾರೆ. 

Advertisement

ಎಪ್ರಿಲ್‌ 30ರಂದು ಕೆ.ವಿ.ಥಾಮಸ್‌ ಸೇವಾವಧಿ ಅಂತ್ಯಗೊಂಡಿ ರುವ ಹಿನ್ನೆಲೆಯಲ್ಲಿ ಆ ಜಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ. ಎನ್‌ಡಿಎ ಸದಸ್ಯ ಬಲ ಹೊಂದಿರುವ ಈ ಸಮಿತಿಯ ಚೇರ¾ನ್‌ ಹುದ್ದೆಗೆ ವಿಪಕ್ಷ ನಾಯಕರೊಬ್ಬರ ಆಯ್ಕೆ ಮಾಡಬೇಕಾಗುತ್ತದೆ. ಇಬ್ಬರು ಹೊಸ ಮುಖಗಳನ್ನು ಹೊರತುಪಡಿಸಿ ಉಳಿದಂತೆ ಈ ಹಿಂದಿನ ಸದಸ್ಯರನ್ನೇ ನೇಮಕ ಮಾಡಲಾಗಿದೆ. ಬಿಜೆಪಿಯ ಸುಭಾಷ್‌ ಚಂದ್ರ ಬಹೇರಿಯ ಹಾಗೂ ರಾಮ್‌ ಶಂಕರ್‌ ಅವರ ಬದಲಾಗಿ ರಿಚರ್ಡ್‌ ಹೇ ಮತ್ತು ಜನಾರ್ದನ ಸಿಂಗ್‌ ಸಿಗ್ರಿವಾಲ್‌ ಅವರನ್ನು ನೇಮಕ ಮಾಡಲಾಗಿದೆ.

1950, ಜನವರಿ 26ರಂದು ಅಸ್ತಿತ್ವಕ್ಕೆ ಬಂದ ಸಂಸತ್‌ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದುವರೆಗೆ 1,571 ವರದಿಗಳನ್ನು ನೀಡಿದೆ. 1967ರಲ್ಲಿ ಈ ಸಮಿತಿಗೆ ವಿಪಕ್ಷದ ಯಾವುದಾದರೊಬ್ಬ ನಾಯಕರನ್ನು ಚೇರ¾ನ್‌ ಹುದ್ದೆಗೆ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next