Advertisement

ಮಲ್ಲೇಶ್ವರ ಮಾರುಕಟ್ಟೆಅಡಮಾನದಿಂದ ಮುಕ್ತ

11:41 AM Sep 12, 2017 | Team Udayavani |

ಬೆಂಗಳೂರು: ಹಿಂದೆ ವಿವಿಧ ಯೋಜನೆಗೆ ಅಗತ್ಯ ಹಣಕ್ಕಾಗಿ ಅಡ ಇಟ್ಟಿದ್ದ ಮಲ್ಲೇಶ್ವರ ಮಾರುಕಟ್ಟೆಯನ್ನು ಶುಕ್ರವಾರ ಬಿಬಿಎಂಪಿ ಅಡಮಾನದಿಂದ ಮುಕ್ತಗೊಳಿಸಿತು. ಅಲ್ಲದೇ, ಪ್ರಸ್ತುತ ಬಾಕಿ ಉಳಿಸಿಕೊಂಡಿರುವ ಅಸಲು ಹಾಗೂ ಬಡ್ಡಿಸಹಿತ 1,348 ಕೋಟಿ ಸಾಲದ ಮೊತ್ತವನ್ನು ಹುಡ್ಕೊ ಬ್ಯಾಂಕ್‌ನಿಂದ ಎಸ್‌ ಬಿಐ ಬ್ಯಾಂಕ್‌ಗೆ ವರ್ಗಾವಣೆ ಮಾಡುವ ಮೂಲಕ 124.90 ಕೋಟಿ ಬಡ್ಡಿ ಹಣ ಉಳಿಸಲು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಧರಿಸಿದೆ. 

Advertisement

ಪಾಲಿಕೆಯು 2011-12ರಲ್ಲಿ ತನ್ನ ವಿವಿಧ ಆಸ್ತಿಗಳನ್ನು ಅಡಮಾನವಿಟ್ಟು ಹುಡ್ಕೊ ಸಂಸ್ಥೆಯಿಂದ ಸಾಲ ಪಡೆದಿತ್ತು. ಹುಡ್ಕೊ ವಿಧಿಸಿರುವ ಬಡ್ಡಿ ಹೆಚ್ಚಾಗಿದ್ದು ಪ್ರಸ್ತುತ 11 ಬ್ಯಾಂಕ್‌ಗಳಲ್ಲಿ ಯಾವುದರಲ್ಲೂ ಅಷ್ಟು  ಪ್ರಮಾಣದ ಬಡ್ಡಿ ಚಾಲ್ತಿಯಲ್ಲಿಲ್ಲ. ಈ ಬಗ್ಗೆ ಸಂಸ್ಥೆ ಗಮನಕ್ಕೆ ತಂದರೆ ಶೇ.9.50 ಬಡ್ಡಿದರದಲ್ಲಿ ಸಾಲ ಮುಂದುವರಿಸುವುದಾಗಿ ಹೇಳಿದೆ.

ಆದರೆ, ಎಸ್‌ಬಿಐ ಆಗಸ್ಟ್‌ ಅಂತ್ಯದ ವೇಳೆಗೆ 986 ಕೋಟಿ ಮೊತ್ತವನ್ನು ಹುಡ್ಕೊಗೆ ಪಾವತಿಸು ವುದಾಗಿ ಹಾಗೂ ಇದಕ್ಕೆ ಶೇ.8.10 ಬಡ್ಡಿ ಪಾವತಿಸುವಂತೆ ಹೇಳಿದೆ. ಇದಕ್ಕೆ ಬಿಬಿಎಂಪಿ ಒಪ್ಪಿದ್ದು, ಬಾಕಿ ಸುಮಾರು 360 ಕೋಟಿ ರು. ಸಾಲವನ್ನು ಎಸ್‌ಬಿಐಗೆ ನೇರವಾಗಿ ವರ್ಗಾಯಿಸಲು ಒಡಂಬಡಿಕೆ ಮಾಡಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next