Advertisement

ಮಲ್ಲೇಶಪ್ಪನಬೆಟ್ಟ ದೇಗುಲ ಆಂಧ್ರ ಪಾಲು?

08:53 PM Mar 11, 2021 | Team Udayavani |

ಬಂಗಾರಪೇಟೆ: ತಾಲೂಕಿನ ಕಾಮಸಮುಧ್ರ ಹೋಬಳಿ ಗಡಿಯ 800 ಅಡಿ ಎತ್ತರದಲ್ಲಿರುವ ಮಲ್ಲಪ್ಪನ ಬೆಟ್ಟದ ಪುರಾತನ ಮಲ್ಲೇಶ್ವರ ದೇವಾಲಯ ಕರ್ನಾಟಕದ್ದೇ ಆಗಿ ದ್ದರೂ ನಮ್ಮ ಅಧಿಕಾರಿಗಳ ಮತ್ತು ಜನಪ್ರತಿನಿಧಿ ಗಳ ದಿವ್ಯ ನಿರ್ಲಕ್ಷ್ಯ ಹಾಗೂ ಆಂಧ್ರ ಪ್ರದೇಶದ ಕಂದಾಯ ಇಲಾಖೆ ಅಧಿಕಾರಿಗಳ ಹಾಗೂ ಜನಪ್ರತಿನಿ ಧಿಗಳ ದೌರ್ಜನ್ಯದಿಂದಾಗಿ ದೇವಾಲಯ ಆಂಧ್ರದ ಪಾಲಾಗುವ ಆತಂಕ ಎದುರಾಗಿದೆ.

Advertisement

ಕರ್ನಾಟಕ ಸರ್ಕಾರದ ವತಿಯಿಂದ 1971ರಿಂದ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ಇಲ್ಲಿ ಪ್ರತಿ ಶಿವರಾತ್ರಿಗೆ ಪೂಜೆಗಳು ನಡೆದುಕೊಂಡು ಬರುತ್ತಿ ದ್ದವು. ಕರ್ನಾಟಕದ ಜೊತೆಗೆ ಆಂಧ್ರ, ತಮಿಳುನಾಡು ಸೇರಿ ಸುಮಾರು 20 ಸಾವಿರ ಭಕ್ತಾದಿಗಳು ಶಿವರಾತ್ರಿಗೆ ಸೇರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.

ನಡೆದದ್ದೇನು?: 2017ರಲ್ಲಿ ಹುಂಡಿ ಹಣ ಹಂಚಿ ಕೊಳ್ಳುವುದರಲ್ಲಿ ನಮ್ಮವರಲ್ಲೇ ಸಣ್ಣದಾಗಿ ವಾದ ಆರಂಭವಾಗಿತ್ತು. ಇದರಲ್ಲಿ ಆಂಧ್ರದ ಗಡಿಯ ಕೆಲ ಗ್ರಾಮಸ್ಥರೂ ಸೇರಿದ್ದರು. ಹುಂಡಿ ಗಲಾಟೆ ದೊಡ್ಡದಾಗಿ ಪೂಜಾರಿ ಮೇಲೆ ಮತ್ತು ಹುಂಡಿ ನಿರ್ವಹಣೆ ಮಾಡುತ್ತಿರುವವರ ಮೇಲೆ ಬತ್ತಲಹಳ್ಳಿ ಮತ್ತು ದೋಣಿಮಡಗು ಗ್ರಾಪಂನ ಕೆಲವರು ತಹಶೀಲ್ದಾರರಿಗೆ ದೂರು ನೀಡಿದರು.

ದೂರಿನ ಬಗ್ಗೆ ಆಗಿನ ತಹಶೀಲ್ದಾರ್‌ ನಿರ್ಲಕ್ಷ್ಯತೆ ತೋರಿದ ಪರಿಣಾಮ ವಿವಾದದ ಬಗ್ಗೆ ರಾಜ್ಯದ ಗಡಿ ಗ್ರಾಮಗಳಲ್ಲಿ ಗುಸುಗುಸು ಆರಂಭವಾಯಿತು. ಶಿವರಾತ್ರಿ ಮತ್ತು ಹೊಸ ವರ್ಷದ ಆರಂಭದ ದಿನ ಹೆಚ್ಚು ಭಕ್ತರು ಬರಲು ಆರಂಭಿಸಿದ್ದು, ಹೆಚ್ಚುತ್ತಿರುವ ಹುಂಡಿ ಹಣದ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು. ಅದೇ ವೇಳೆಗೆ ಆಂಧ್ರದ ಕುಪ್ಪಂ ಕ್ಷೇತ್ರದ ಶಾಸಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡುರ ಆಪ್ತ ಸಹಾಯಕ, ಅರಣ್ಯಾಧಿಕಾರಿಗಳು ಯಾವುದೇ ದಾಖಲೆ ನೀಡದೆ ಬೆಟ್ಟ ಮತ್ತು ದೇವಾಲಯ ಆಂಧ್ರಕ್ಕೆ ಸೇರುತ್ತದೆ ಎಂದು ಇಲ್ಲಿಯ ಅಧಿಕಾರಿಗಳನ್ನ ಬೆದರಿಸಲಾರಂಭಿಸಿದರು.

ದೇವಾಲಯ ಕೆಡವಿದರು: ಆಂಧ್ರದ ತಗಾದೆ ಬಗ್ಗೆ ಸ್ಥಳೀಯರು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಅರ್ಜಿ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಕಾರಣ ಆಂಧ್ರದ ಸ್ಥಳೀಯರು 2018ರಲ್ಲಿ ದೇವಾಲ ಯವನ್ನೇ ಕೆಡವಿದರು.

Advertisement

ಪ್ರತಿಕ್ರಿಯಿಸಲಿಲ್ಲ: ದೇವಾಲಯ ಕೆಡವಿರುವ ಬಗ್ಗೆತಹಶೀಲ್ದಾರರು ನೀಡಿದ ದೂರಿನ ಮೇರೆಗೆಕಾಮಸಮುದ್ರ ಪೊಲೀಸರು 2018ರಲ್ಲಿ ದೂರುದಾಖಲಿಸಿಕೊಂಡರು. ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿಆಂಧ್ರದ ಅಧಿಕಾರಿಗಳ ಕಾನೂನು ಬಾಹಿರ ನಡವಳಿಕೆಯಿಂದ ಗಡಿ ಸಮಸ್ಯೆ ಉದ್ಭವಿಸುವ ಎಲ್ಲಾ ಅವಕಾಶಗಳಿವೆ ಎಂದು ಕಾಮಸಮುದ್ರ ಪೊಲೀಸರು ಸರ್ಕಾರಕ್ಕೆಪತ್ರ ಬರೆದರು. ಸರ್ವೆ ನಡೆಸಿ ವಾದ ಬಗೆಹರಿಸಿಕೊಳ್ಳಲು  ತಾಲೂಕು ಆಡಳಿತ ಜಂಟಿ ಸರ್ವೆಗೆ ಅನೇಕ ಬಾರಿ ಪತ್ರಗಳ ಮೂಲಕ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಸ್ಯಾಟ್‌ಲೆçಟ್‌ ಸರ್ವೆ ಅಗತ್ಯ: 2018ರಲ್ಲಿ ಮಲ್ಲೇಶಪ್ಪನಬೆಟ್ಟ ದೇಗುಲ ವಿವಾದ ಏರ್ಪಾಟ್ಟಾಗ ಅಂದಿನ ಜಿಲ್ಲಾಧಿಕಾರಿ ಮೂರು ರಾಜ್ಯಗಳ ನಡುವೆ ಜಂಟಿ ಸರ್ವೆಗೆ ಪ್ರಯತ್ನಿಸಿದ್ದರು. ಆದರೆ ಆಂಧ್ರ ಮತ್ತು ತಮಿಳುನಾಡು ಜಿಲ್ಲಾಧಿಕಾರಿಗಳು ಸ್ಪಂದಿಸಲಿಲ್ಲ. ಮೂರು ರಾಜ್ಯಗಳ ನಡುವೆ ವಿವಾದ ಇರುವುದರಿಂದ ಸ್ಯಾಟ್‌ಲೆçಟ್‌ ಸರ್ವೆ ಮಾಡುವುದು ಸೂಕ್ತ ಎಂದು ಅಂದಿನ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯದ

ಮುಖ್ಯಕಾರ್ಯದರ್ಶಿಗಳಿಗೆ ಸರ್ಕಾರದ ಮಟ್ಟದಲ್ಲಿ ಬಗೆಹರಿಸಬೇಕೆಂದು ಪತ್ರ ಬರೆದಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಂ.ಸಿ.ಮಂಜುನಾಥ್‌

 

Advertisement

Udayavani is now on Telegram. Click here to join our channel and stay updated with the latest news.

Next