Advertisement
ರಾಜ್ಯಸಭೆ ಸದಸ್ಯ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ನಂತರ ಕಲಬುರಗಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತಗೊಂಡು ಮಾತನಾಡಿದರು.
Related Articles
Advertisement
ಜನ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಸ್ವಾತಂತ್ರ್ಯಕ್ಕೆ ಉಳಿಗಾಲವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಡಾ. ಖರ್ಗೆ, ತಮ್ಮನ್ನು ಸೋಲಿಸಿದ್ದು ಕಲಬುರಗಿ ಜನ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಹಾಗೂ ಆರ್ ಎಸ್ ಎಸ್ ನವರು ಸೋಲಿಸಿದ್ದಾರೆ ಎಂದರು.
ತಮ್ಮ ಉಸಿರು ಇರುವರೆಗೂ ರಾಜಕೀಯ ಕ್ಷೇತ್ರದಲ್ಲಿ ಹೋರಾಟ ಮುಂದುವರೆಯುವತ್ತೇ ಎಂದು ಗುಡುಗಿದ ಡಾ. ಖರ್ಗೆ, ಈಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಳು ಜಿಲ್ಲೆಗಳಾಗಿವೆ. 371 ಜೆ ಜಾರಿ ಮುನ್ನ ಈ ಭಾಗದಲ್ಲಿ ಕೇವಲ 80 ವೈದ್ಯಕೀಯ ಸೀಟುಗಳು ಸಿಗುತ್ತಿದ್ದವು. ಆದರೆ 4000 ಸಾವಿರ ಸೀಟುಗಳು ಸಿಕ್ಕಿವೆ. ಇಂತಹ ಕಾಯ್ದೆ ಯಾರಾದರೂ ಜಾರಿ ತಂದಿದ್ದಾರೆಯೇ, ಅದೇ ರೀತಿ ನೂರಾರು ತಹಸೀಲ್ದಾರರು, ಡಿವೈಎಸ್ಪಿಗಳಾಗಿದ್ದಾರೆ. ಆದರೆ ಬಿಜೆಪಿಗರಿಗೆ ಈ ಭಾಗದ ಅಭಿವೃದ್ಧಿ ಮಾಡೋದು ಒತ್ತಟ್ಟಗಿರಲಿ, ಈ ಭಾಗದ ಯೋಜನೆಗಳನ್ನೇ ಕಿತ್ತುಕೊಂಡು ಹೋಗುತ್ತಿದ್ದಾರೆ ಎಂದು ಡಾ.ಖರ್ಗೆ ಆರೋಪಿಸಿದರು.