Advertisement
ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಮಳಿಯಪ್ಪ ಪತ್ತಾರ, 8ನೇ ಮೇ 1937ರಲ್ಲಿ ಬಸಪ್ಪ, ಮಾನಪ್ಪ ಪತ್ತಾರ ಮಗನಾಗಿ ಜನಿಸಿದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಗೀಳು ಹಚ್ಚಿಕೊಂಡಿದ್ದ ಗೆಳೆತನದ ಫಲ ನಾಟಕ ಬರೆದು ಸೈ ಎನಿಸಿಕೊಂಡಿದ್ದರು. 30-10-1961ರಲ್ಲಿ ಕಂದಕೂರು ಗ್ರಾಮದ ಶಿಕ್ಷಕರಾಗಿ ನೇಮಕಗೊಂಡಿದ್ದ ಅವರು ನಂತರ ಲಿಂಗಸುಗೂರು ತಾಲೂಕಿನಲ್ಲಿ ಮಲ್ಲಾಪೂರದಲ್ಲಿ 1968ರಿಂದ 1972ರವರೆಗೆ ಸೇವೆ ಸಲ್ಲಿಸಿ ಮತ್ತೆ ಕಂದಕೂರು ಗ್ರಾಮದಲ್ಲಿ ಶಿಕ್ಷಣ ಸೇವೆ ಮುಂದುವರಿಸಿದರು. ನಂತರ ಗಂಗಾವತಿ ತಾಲೂಕಿನ ಕುಂಟೋಜಿ, ಕುಷ್ಟಗಿ ತಾಲೂಕಿನ ಪರಸಾಪೂರ ಶಾಲೆಯಲ್ಲಿ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಕುರಬನಾಳ ಗ್ರಾಮದಲ್ಲಿ ನಿವೃತ್ತರಾಗಿದ್ದರು. ಅವರು ಶಿಕ್ಷಕ ಸೇವೆಯ ಜೊತೆಗೆ, ಸಾಹಿತ್ಯ ಸೇವೆ ಹಾಗೂ ಜಾನಪದ ವೈದ್ಯರಾಗಿ ತ್ರಿವಿಧ ಸೇವೆ ಸಲ್ಲಿಸಿದ್ದ ಅವರು, ಇವರು ನೀಡುವ ಮೂಲವ್ಯಾದಿಗೆ ಉಚಿತ ಔಷಧಕ್ಕೆ ಮನೆ ಮಾತಾಗಿದ್ದರು. 1972ರಲ್ಲಿ ಗ್ರಾಮಸ್ಥರೊಬ್ಬರಿಗೆ ಮೂಲವ್ಯಾದಿ ಗುಣಪಡಿಸಿದ ಹಿನ್ನೆಲೆಯಲ್ಲಿ 5 ಎಕರೆ ಜಮೀನು ನೀಡಿದ್ದರು. ಗುಣಮುಖರಾಗಿದ್ದ ತಹಶೀಲ್ದಾರ ಕೊಳವೆಬಾವಿ ಹಾಕಿಸಿ ಧನ್ಯತೆ ಮೆರೆದಿದ್ದರು.
Related Articles
Advertisement
ಸಂತಾಪ:
ಅವರ ಅಗಲಿಕೆಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ, ಹಸನಸಾಬ್ ದೋಟಿಹಾಳ, ಶೇಖರಗೌಡ ಮಾಲಿಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸದಸ್ಯರ ಅಮಾನತು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ; ಡಿಕೆಶಿ