Advertisement

AAP MP ಮಲಿವಾಲ್‌ ಕೇಸು: ಕೇಜ್ರಿವಾಲ್‌ ಆಪ್ತ ಬಿಭವ್‌ಗೆ ಸುಪ್ರೀಂ ತರಾಟೆ

01:03 AM Aug 02, 2024 | Team Udayavani |

ಹೊಸದಿಲ್ಲಿ: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ಗೆ ಸುಪ್ರೀಂಕೋರ್ಟ್‌ ತರಾಟೆ ತೆಗೆದುಕೊಂಡಿದೆ. “ನಿಮ್ಮನ್ನು ನೀವು ಏನೆಂದು ಕೊಂಡಿದ್ದೀರಿ? ಅಧಿಕಾರದ ಮದ ತಲೆಗೆ ಏರಿ ದೆಯೇ? ಎಂದು ಚಾಟಿ ಬೀಸಿದೆ. ದಿಲ್ಲಿ ಮುಖ್ಯಮಂತ್ರಿ ಬಂಗಲೆ ಖಾಸಗಿ ನಿವಾಸವೇ? ಇಂಥ ಗೂಂಡಾ ಗಳು ಅಲ್ಲಿ ಸೇರಿಕೊಂಡು ಮಹಿಳೆಯರ ಮೇಲೆ ಹಲ್ಲೆ ನಡೆಸುವುದಕ್ಕೆ ಆ ಕಚೇರಿ ಇರುವುದೇ ಎಂದೂ ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next