Advertisement

ಮುಂಬೈ ತಂಡ ಸೇರಲಿರುವ ಮಾಲಿಂಗ

07:05 AM Mar 27, 2019 | mahesh |

ಕೊಲಂಬೊ: ಈ ಬಾರಿಯ ಐಪಿಎಲ್‌ನಲ್ಲಿ ಶ್ರೀಲಂಕಾ ಆಟಗಾರ ಲಸಿತ ಮಾಲಿಂಗ ಅವರ ಉಪಸ್ಥಿತಿಯ ಕುರಿತು ಮಾತುಕತೆ ಗಳು ಕಳೆದ ಕೆಲವು ದಿನಗಳಿಂದ ನಡೆಯುತ್ತಿವೆ. ಈ ಎಲ್ಲ ಚರ್ಚೆಗಳಿಗೆ ಮೂಲ ಕಾರಣ ಶ್ರೀಲಂಕಾ ಕ್ರಿಕೆಟ್‌ ಮಂಡಳಿ. ವಿಶ್ವಕಪ್‌ ತಂಡದಲ್ಲಿ ಅರ್ಹತೆ ಗಿಟ್ಟಿಸಿ ಕೊಳ್ಳಬೇಕಾದರೇ ಏಕದಿನ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಮಾಡಿದ ಕಾರಣ ಶ್ರೀಲಂಕಾ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವುದು ಮುಂದೂಡಲ್ಪಟ್ಟಿತ್ತು.

Advertisement

ಎಸ್‌ಎಲ್‌ಸಿಯ ಕೊನೆ ಗಳಿಗೆಯ ನಿರ್ಧಾರವನ್ನು ಬಿಸಿಸಿಐ ಈ ಹಿಂದೆ ಖಂಡಿಸಿತ್ತು. ಇದಲ್ಲದೆ ಮುಂದಿನ ಎರಡು ಪಂದ್ಯಗಳಲ್ಲಿ ಮಾಲಿಂಗ ಆಡಲಿದ್ದಾರೆ ಎಂಬ ಸುದ್ದಿಯೂ ಕೂಡ ಹರಿದಾಡಿತ್ತು. ಸದ್ಯ ಬಂದಿರುವ ಸುದ್ದಿಯಂತೆ ಎಸ್‌ಎಲ್‌ಸಿ ನಿರ್ಧಾರವನ್ನು ಸ್ವಲ್ಪ ಸಡಿಸಿಲಿದ್ದು, ಮಾಲಿಂಗ ಅವರಿಗೆ ಪ್ರತಿಷ್ಠತ ಟಿ20 ಲೀಗ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಆದರೆ ಎಷ್ಟು ಪಂದ್ಯಗಳಲ್ಲಿ ಅವರು ಆಡಲಿದ್ದಾರೆ ಎಂಬ ಸುದ್ದಿಯನ್ನು ಮಾತ್ರ ಬಹಿರಂಗಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next