Advertisement

ಶೀಘ್ರದಲ್ಲೇ ಮಾಲಿಂಗ ಕ್ರಿಕೆಟ್‌ ನಿವೃತ್ತಿ

06:20 AM Feb 09, 2018 | |

ಸೇಂಟ್‌ ಮಾರಿಟ್ಸ್‌ (ಸ್ವಿಜರ್‌ಲ್ಯಾಂಡ್‌): ಶ್ರೀಲಂಕಾದ ಸ್ಪೀಡ್‌ಸ್ಟರ್‌. “ಲಗೋರಿ ಬೌಲರ್‌’ ಖ್ಯಾತಿಯ ಲಸಿತ ಮಾಲಿಂಗ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಲಿದ್ದಾರೆ. ಬುಧವಾರವಷ್ಟೇ ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್‌ ಮೆಂಟರ್‌ ಆಗಿ ಆಯ್ಕೆಯಾದ ಬಳಿಕ ಸ್ವಿಜರ್‌ಲ್ಯಾಂಡಿನಿಂದ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ನಿವೃತ್ತಿಯ ಸುಳಿವು ನೀಡಿದ್ದಾರೆ.

Advertisement

“ಮಾನಿಸಿಕವಾಗಿ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮುಗಿದಿದೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತೇನೆ ಎಂಬ ಯಾವುದೇ ನಂಬಿಕೆ ನನ್ನಲಿಲ್ಲ. ಶೀಘ್ರದಲ್ಲೇ ಕ್ರಿಕೆಟ್‌ ನಿವೃತ್ತಿಯನ್ನು ಘೋಷಿಸುವ ಯೋಜನೆಯಲ್ಲಿದ್ದೇನೆ…’ ಎಂದು “ಸೇಂಟ್‌ ಮಾರಿಟ್ಸ್‌ ಐಸ್‌ ಕ್ರಿಕೆಟ್‌ ಚಾಲೆಂಜ್‌’ನಲ್ಲಿ ಪಾಲ್ಗೊಂಡಿರುವ ಮಾಲಿಂಗ ಹೇಳಿದರು.

ಐಪಿಎಲ್‌ ಆಟ ಇನ್ನಿಲ್ಲ
“ಈ ಕುರಿತು ನಾನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಜತೆ ಚರ್ಚಿಸಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಆಡಬಹುದಾದರೂ ಇದಕ್ಕೆ ನನ್ನ ದೇಹ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂಬುದು ಮುಖ್ಯ. ನನ್ನ ಐಪಿಎಲ್‌ ಆಟದ ಬದುಕು ಕೂಡ ಕೊನೆಗೊಂಡಿದೆ. ನಾನೀಗ ಮುಂಬೈ ತಂಡದ ಬೌಲಿಂಗ್‌ ಮೆಂಟರ್‌ ಆಗಿ ನೂತನ ಅಧ್ಯಾಯ ಆರಂಭಿಸುತ್ತಿದ್ದೇನೆ. ನನ್ನನ್ನು ಸಂಪರ್ಕಿಸಿದ ಆಡಳಿತ ಮಂಡಳಿ, ಮುಂದಿನ 3 ವರ್ಷಕ್ಕಾಗುವ ಬಲಿಷ್ಠ ತಂಡವನ್ನು ರೂಪಿಸುವಂತೆ ಕೇಳಿಕೊಂಡಿದ್ದಾರೆ’ ಎಂದರು. ಒಟ್ಟು 157 ಐಪಿಎಲ್‌ ಪಂದ್ಯಗಳನ್ನಾಡಿರುವ ಮಾಲಿಂಗ, ಇದರಲ್ಲಿ ಮುಂಬೈ ಇಂಡಿಯನ್ಸ್‌ ಪರವೇ ಸರ್ವಾಧಿಕ 110 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

“ಪ್ರತಿಯೊಬ್ಬರಿಗೂ ನಿವೃತ್ತಿ ಬಗ್ಗೆ ಸಂಕೇತವೊಂದು ಲಭಿಸುತ್ತದೆ. ಮಹಾನ್‌ ವೇಗಿ ವಾಸಿಮ್‌ ಅಕ್ರಮ್‌ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನನಗೀಗ 34 ವರ್ಷ. ಇನ್ನು ನಾನು ಯುವಕನಾಗುವುದಿಲ್ಲ. ಕ್ರಿಕೆಟ್‌ ನಿವೃತ್ತಿ ಘೋಷಿಸಲು ಇದೇ ಸೂಕ್ತ ಸಮಯ. ಹೊಸ ಇನ್ನಿಂಗÕನ್ನು ಸಂತೋಷದಿಂದಲೇ ಆರಂಭಿಸುತ್ತೇನೆ’ ಎಂದು ಮಾಲಿಂಗ ಸಂದರ್ಶನದ ವೇಳೆ ಹೇಳಿದರು.

ಒಟ್ಟು 248 ಟಿ20 ಪಂದ್ಯಗಳಿಂದ (ಅಂತಾರಾಷ್ಟ್ರೀಯ ಹಾಗೂ ಫ್ರಾಂಚೈಸಿ) ದಾಖಲೆಯ 331 ವಿಕೆಟ್‌ ಉರುಳಿಸಿರುವುದು ಲಸಿತ ಮಾಲಿಂಗ ಸಾಧನೆ.

Advertisement

ಈ ಸಂದರ್ಭದಲ್ಲಿ ಮುಂಬೈ ತಂಡದ ಜಸ್‌ಪ್ರೀತ್‌ ಬುಮ್ರಾ ಸಾಧನೆಯನ್ನು ಪ್ರಶಂಸಿಸಿದ ಮಾಲಿಂಗ, “ಅವರೋರ್ವ ಅಪಾಯಕಾರಿ ಡೆತ್‌ ಓವರ್‌ ಬೌಲರ್‌. ಐಪಿಎಲ್‌ ಯಶಸ್ಸಿನಿಂದಲೇ ಅವರೀಗ ಭಾರತ ತಂಡದಲ್ಲಿ ಕ್ಲಿಕ್‌ ಆಗುತ್ತಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next