Advertisement

ಬಿಜೆಪಿಗರೇ ನನ್ನ ವಿರುದ್ಧ ನನ್ನ ಸಹೋದರನನ್ನು ಎತ್ತಿ ಕಟ್ಟುತ್ತಿದ್ದಾರೆ: ಮಾಲಿಕಯ್ಯ ಅಳಲು

03:11 PM Feb 21, 2023 | Team Udayavani |

ಕಲಬುರಗಿ: ನಮ್ಮ ಬಿಜೆಪಿ ಪಕ್ಷದಲ್ಲಿ ಕೆಲವರು ನನ್ನ ವಿರುದ್ಧ ನನ್ನ ಸಹೋದರ ನಿತಿನ್ ಗುತ್ತೇದಾರರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಾನು ಗೆದ್ದರೆ ಮುಂದೆ ರಚನೆಯಾಗುವ ಬಿಜೆಪಿ ಸರ್ಕಾರದಲ್ಲಿ ನಾನು ಮಂತ್ರಿಯಾಗುವುದು ಕೆಲವರಿಗೆ ಇಷ್ಟವಿಲ್ಲ. ಇದರಿಂದಾಗಿ ನನ್ನ ಸಹೋದರನನ್ನು ಅಖಾಡಕ್ಕೆ ಇಳಿಸುವ ಮೂಲಕ ಮತದಾರರಲ್ಲಿ ಗೊಂದಲ ಉಂಟು ಮಾಡಿ, ನನ್ನನ್ನು ಸೋಲಿಸುವ ತಂತ್ರವೂ ಇದರಲ್ಲಿ ಅಡಗಿದೆ ಎಂದರು.

ಅಫಜಲಪುರ ವಿಧಾನ ಸಭೆಯ ಟಿಕೆಟ್ ಗಾಗಿ ಉಂಟಾಗಿರುವ ಗೊಂದಲದ ಕುರಿತು ಸಹಮತ ವ್ಯಕ್ತಪಡಿಸಿದ ಅವರು, ನನ್ನ ಸಹೋದರ ನಿತಿನ್ ಗುತ್ತೇದಾರ್ ಇನ್ನು ಯಂಗ್ ಇದ್ದಾನೆ. ಅವನಿಗೂ ಶಾಸಕನಾಗಬೇಕೆಂಬ ಆಸೆ ಇದೆ, ಆಸೆ ತಪ್ಪೇನಲ್ಲ. ನಾನು 27ನೇ ವರ್ಷಕ್ಕೆ ಶಾಸಕನಾಗಿದ್ದೆ. ಈಗ ಅವನು ಶಾಸಕನಾಗಲು ಎಲ್ಲ ರೀತಿಯಿಂದ ತಯಾರಿ ಮಾಡಿಕೊಂಡಿದ್ದು ಅರ್ಹನಿದ್ದಾನೆ. ಬಿಜೆಪಿಯಲ್ಲಿ ಆತನಿಗೆ ಟಿಕೆಟ್ ಕೊಟ್ಟರೆ ನಾನು ಆತನ ಪರವಾಗಿ ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಕೊಟ್ಟರೆ ಅವನು ನನ್ನ ಪರವಾಗಿ ಕೆಲಸ ಮಾಡುತ್ತಾನೆ. ಇದು ನಮ್ಮ ಮನೆಯ ವಿಚಾರ ಆಗಿರುವುದರಿಂದ ನಾವು ಸರಿ ಮಾಡಿಕೊಳ್ಳುತ್ತೇವೆ ಎಂದು ಗಂಭೀರ ಮುಖಭಾವದಲ್ಲೂ ನಕ್ಕರು.

ಇದನ್ನೂ ಓದಿ:ಫೆ.27ಕ್ಕೆ ಪ್ರಧಾನಿ ಮೋದಿ ಅವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಆದರೆ, ಕೆಲವು ಬಿಜೆಪಿಗರು ಆತನನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಇದು ಸರಿಯಾದ ರಾಜಕಾರಣ ಅಲ್ಲ ಎಂದು ಸಿಡಿಮಿಡಿಕೊಂಡರು.

Advertisement

140 ಸೀಟು ಗ್ಯಾರಂಟಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ವತಂತ್ರ ಪಕ್ಷವಾಗಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಮಾಲಿಕಯ್ಯ ಗುತ್ತೇದಾರ್ ಹೇಳಿದರು.

ಮೋದಿಯವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ದೊಡ್ಡಮಟ್ಟದ ಗೆಲುವು ಸಾಧಿಸಲಿದೆ ಎಂದರು ಕಲ್ಬುರ್ಗಿ ಜಿಲ್ಲೆಯಲ್ಲಿ 9 ಸ್ಥಾನಗಳ ಪೈಕಿ 7 ಖಂಡಿತ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಲೋಕಸಭಾ ಸದಸ್ಯರು ಸರಿಯಾಗಿ ತಮ್ಮ ಅನುದಾನವನ್ನು ಬಳಕೆ ಮಾಡುತ್ತಿಲ್ಲವಲ್ಲ ನೀವು ಸೋಲಿಲ್ಲದ ಸರದಾರ ನನ್ನ ಸೋಲಿಸಿ ಇನ್ಯಾರನ್ನು ತಂದಿರೋದು ಜನರಿಗೆ ನ್ಯಾಯ ಸಿಕ್ಕಂತಾಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಿ ನಮ್ಮ ಪಕ್ಷ ಶಿಸ್ತಿನ ಪಕ್ಷ. ಇಲ್ಲಿ ಕೆಲಸ ಮಾಡದೆ ಹೋದರೆ ಟಿಕೆಟ್ ಸಿಗುವುದು ಗ್ಯಾರಂಟಿ ಇಲ್ಲ. ಈ ಕುರಿತು ಹೈಕಮಾಂಡ್ ಎಲ್ಲ ರೀತಿಯ ಗಮನ ಇಟ್ಟಿರುತ್ತದೆ ಎಂದರು.

ಶಿಸ್ತು ಕಮಿಟಿ ಎಲ್ಲವನ್ನು ಗಮನಿಸುತ್ತಿದೆ. ಉತ್ತಮವಾಗಿ ಕೆಲಸ ಮಾಡುವ ಮತ್ತು ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next