ಹಾಸನ: ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಾಮ ಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದ ನೀಡಿ ರುವ ಎಲ್ಲಾ ಅಂಶಗಳೂ ಸಮರ್ಪಕ ವಾಗಿವೆ. ಕೆಲವರು ದುರುದ್ದೇಶ ದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ಕುಟುಂಬದ ವಿರುದ್ಧ ಆರೋಪ: ನಮ್ಮ ಕುಟುಂಬ ದವರ ವಿರುದ್ಧ ಆರೋಪ ಮಾಡುತ್ತಿರುವವ ರೊಂದಿಗೆ ಕೆಲವು ಮಾಧ್ಯಮದವೂ ಶಾಮೀಲಾಗಿ ದ್ದಾರೆ. ಲೋಕಸಭಾ ಚುನಾವಣೆ ಆರಂಭವಾಗಿದಾಗಿ ನಿಂದ ಕೆಲವು ಮಾಧ್ಯಮಗಳು ಹೇಗೆ ನಡೆದು ಕೊಂಡಿವೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದ ಅವರು, ಈಗ ಏನೇನು ಆರೋಪ ಮಾಡು ತ್ತಿದ್ದಾರೋ ಅವುಗಳಿಗೆಲ್ಲ ಕಾನೂನು ಪ್ರಕಾರ ಏನು ಉತ್ತರ ಕೊಡಬೇಕೋ ಅದೆಲ್ಲಕ್ಕೂ ಜೆಡಿಎಸ್‌ನ ಚುನಾವಣಾ ಏಜೆಂಟರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ನಾಮಪತ್ರ ಪ್ರಶ್ನಿಸುವಂತಿಲ್ಲ: ಒಂದು ಬಾರಿ ಜಿಲ್ಲಾ ಚುನಾವಣಾಧಿಕಾರಿಯವರು ಅಭ್ಯರ್ಥಿಯ ನಾಮ ಪತ್ರವನ್ನು ಅಂಗೀಕರಿಸಿದ ನಂತರ ಅದರ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಈ ಬಗ್ಗೆ ಚುನಾವಣಾ ಆಯೋಗವು 2014 ಚುನಾವಣಾ ಸಂದರ್ಭ ದಲ್ಲಿಯೇ ಸ್ಪಷ್ಟಪಡಿಸಿದೆ ಎಂದು ದಾಖಲೆಯ ಪ್ರತಿಯೊಂದನ್ನು ಪ್ರದರ್ಶಿಸಿದ ರೇವಣ್ಣ ಅವರು, ಜಿಲ್ಲಾ ಚುನಾವಣಾಧಿಕಾರಿಯವರು ಹಾಗೂ ರಾಜ್ಯ ಚುನಾವಣಾಧಿಕಾರಿಯವರು ತನಿಖೆ ಎಂದು ಹೇಳುತ್ತಿದ್ದಾರೋ, ಏನು ತನಿಖೆ ಮಾಡುತ್ತಾರೋ ನನಗೆ ಗೊತ್ತಿಲ್ಲ ಎಂದರು.
ಸಿಎಂ ಹುದ್ದೆ ಖಾಲಿ ಇಲ್ಲ: ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹಾಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಿ ಸುವ ಪರಿಸ್ಥಿತಿಯೂ ಇಲ್ಲ. ಅತಂತ್ರ ರಾಜಕೀಯ ಪರಿಸ್ಥಿತಿಯೂ ನಿರ್ಮಾಣವಾಗುವುದಿಲ್ಲ. ಹಾಗಾಗಿ ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯಾಗುವ ಅವಶ್ಯಕತೆ ನಿರ್ಮಾಣವಾಗುವುದೂ ಇಲ್ಲ ಎಂದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪ್ರಮಾಣಪತ್ರದಲ್ಲಿ ಲೋಪವಿದೆ ಎಂದು ಕೆಲವರು ದುರುದ್ದೇಶದಿಂದ ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಭಿನ್ನಾಭಿಪ್ರಾಯವಿಲ್ಲ: ರೇವಣ್ಣ ಮತ್ತು ಕುಮಾರ ಸ್ವಾಮಿ ನಡುವೆ ಭಿನ್ನಾಭಿಪ್ರಾಯ ಮೂಡಿಸಲೂ ಯಾರಿಂದಲೂ ಸಾಧ್ಯವಿಲ್ಲ. ಅಣ್ಣ – ತಮ್ಮ ಜಗಳ, ಹೊಡೆದಾಡುವರೆಂಬ ಕೆಲವರ ಭ್ರಮೆ ಅಷ್ಟೇ. ಕುಮಾರಸ್ವಾಮಿ ಅವರೇ ಮುಂದಿನ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುವರು. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.