ನವದೆಹಲಿ: ಮಾಲಿಯ ಪದಚ್ಯುತ ಹಂಗಾಮಿ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿಯನ್ನು ಬಿಡುಗಡೆಗೊಳಿಸಿರುವುದಾಗಿ ಮಿಲಿಟರಿ ಪಡೆ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ
ಸುಮಾರು ಒಂಬತ್ತು ತಿಂಗಳ ಹಿಂದೆ ನಡೆದ ಕ್ಷಿಪ್ರ ಮಿಲಿಟರಿ ದಂಗೆಯಲ್ಲಿ ಮಾಲಿಯ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬಂಧಿಸಿತ್ತು. ನಂತರ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಹಂಗಾಮಿ ಅಧ್ಯಕ್ಷ ಬಹ್ ಎನ್ಡಾವ್ ಮತ್ತು ಪ್ರಧಾನಿ ಮೊಕ್ಟರ್ ಓವಾನೆ ಅವರನ್ನು ಬಂಧಿಸಿ ಸೋಮವಾರ ಮಿಲಿಟರಿ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿತ್ತು. ಬುಧವಾರ ಎನ್ಡಾವ್ ಮತ್ತು ಮೊಕ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಮಾಲಿಯಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ಅಡ್ಡಿಯುಂಟು ಮಾಡುತ್ತಿರುವುದಾಗಿ ಆರೋಪಿಸಿದ್ದ ಉಪಾಧ್ಯಕ್ಷ ಅಸ್ಸಿಮಿ ಗೊಯ್ಟಾ ಕಳೆದ ಆಗಸ್ಟ್ ನಲ್ಲಿ ಮಾಜಿ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕೈಟಾ ಅವರನ್ನು ಕ್ಷಿಪ್ರ ಸೇನಾ ದಂಗೆಯ ಮೂಲಕ ಬಂಧಿಸಿದ್ದರು.