Advertisement

ಮಲೆಕುಡಿಯ ಜನಾಂಗಕ್ಕೆ ಮೂಲಸೌಕರ್ಯ ಒದಗಿಸಲು ಕ್ರಮ: ಸಚಿವ ಶ್ರೀರಾಮುಲು

12:12 AM Mar 24, 2022 | Team Udayavani |

ಬೆಂಗಳೂರು: ಪಶ್ಚಿಮ ತಪ್ಪಲಿನ ಮಲೆಕುಡಿಯ ಜನಾಂಗಕ್ಕೆ ಮೂಲಸೌಕರ್ಯ ಕಲ್ಪಿಸಲು ಅರಣ್ಯ ಸಚಿವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಹರೀಶ್‌ ಪೂಂಜ ಅವರು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಸೇರಿದಂತೆ 11 ಜಿಲ್ಲೆಗಳಲ್ಲಿ ವಾಸಿಸುವ ಮಲೆಕುಡಿಯ ಹಾಗೂ ಇತರ ಬುಡಕಟ್ಟು ಜನಾಂಗದ ಅಭಿವೃದ್ಧಿ ಕುರಿತು ಅಧಿವೇಶನದ ಬಳಿಕ ಸಭೆ ನಡೆಸುವುದಾಗಿ ಹೇಳಿದರು.

104 ಕೋಟಿ ರೂ. ಮಂಜೂರು
ಬೆಳಗಾವಿ, ಧಾರವಾಡ, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಮೈಸೂರು, ಹಾಸನ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿರುವ ಬುಡಕಟ್ಟು ಜನಾಂಗದ ಅಭಿವೃದ್ದಿಗಾಗಿ ಮೂರು ವರ್ಷಗಳಲ್ಲಿ 104 ಕೋಟಿ ರೂ. ಮಂಜೂರಾಗಿದ್ದು, 65 ಕೋಟಿ ರೂ. ಬಿಡುಗಡೆಯಾಗಿದೆ. ಶೈಕ್ಷಣಿಕ, ಸಾಮಾಜಿಕ ಸಬಲೀಕರಣ, ಆರ್ಥಿಕ ಅಭಿವೃದ್ಧಿ, ತರಬೇತಿ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬುಡಕಟ್ಟು ಜನಾಂಗಕ್ಕಾಗಿ 64 ಆಶ್ರಮ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಸಚಿವ ರಾಮುಲು ಅವರೊಂದಿಗೆ ಖಾಸಗಿ ಬಸ್‌ ಮಾಲಕರ ಒಕ್ಕೂಟದ ಸಭೆ

ಈ ಉತ್ತರಕ್ಕೆ ಹರೀಶ್‌ ಪೂಂಜ ಬೇಸರ ವ್ಯಕ್ತಪಡಿಸಿದಾಗ ಮಧ್ಯ ಪ್ರವೇಶಿಸಿದ ಸ್ಪೀಕರ್‌, ಅರಣ್ಯ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ನಡೆಸಿ ಪರಿಹರಿಸಲು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next