Advertisement

ಮಹದೇಶ್ವರ ಬೆಟ್ಟ: ಯುಗಾದಿ ರಥೋತ್ಸವ ಇಲ್ಲ, ಸರಳ ಆಚರಣೆ, ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧ

09:28 PM Apr 10, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ದೇವಾಲಯದಲ್ಲಿ ಕೋವಿಡ್ ಕಾರಣಕ್ಕೆ ಈ ಬಾರಿಯೂ ಯುಗಾದಿ ಜಾತ್ರೆಯನ್ನು ಸರಳ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ರಥೋತ್ಸವ ನಡೆಸಲಾಗುತ್ತಿಲ್ಲ.

Advertisement

ದೇವಾಲಯದ ಅರ್ಚಕರು, ಪ್ರಾಧಿಕಾರದ ಸಿಬ್ಬಂದಿ, ಸ್ಥಳೀಯರು, ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಹೊರತುಪಡಿಸಿ, ತಾಲೂಕು, ಜಿಲ್ಲಾ, ಮತ್ತು ಅಂತರ ಜಿಲ್ಲಾ ಸಾರ್ವಜನಿಕರು ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಏ. 10ರಿಂದ ಸಾಂಪ್ರದಾಯಿಕವಾಗಿ ಆರಂಭವಾಗಿ ಏ. 13ರವರೆಗೆ ನಡೆಯುವ ಯುಗಾದಿ ಜಾತ್ರಾ ಕಾರ್ಯಕ್ರಮಕ್ಕೆ 500 ಜನರಿಗೆ ಮೀರದಂತೆ ಭಕ್ತಾದಿಗಳಿರಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ರಥೋತ್ಸವದಲ್ಲಿ ಸುಮಾರು 3000 ಭಕ್ತರು ಸೇರಬಹುದೆಂದು ಅಂದಾಜಿಸಲಾಗಿದೆ. ಸರ್ಕಾರದ ನಿಯಮದಂತೆ 500 ಜನರಿದ್ದರೆ ರಥ ಎಳೆಯಲು ಸಾಧ್ಯವಾಗದು ಎಂಬ ಕಾರಣಕ್ಕೆ ರಥೋತ್ಸವ ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ರಸಗೊಬ್ಬರ ಬೆಲೆ ಹೆಚ್ಚಳ ಹಿನ್ನೆಲೆ: ಕಂಪನಿಗಳ ಜೊತೆ ಕೇಂದ್ರ ಸಚಿವ ಸದಾನಂದ ಗೌಡ ಸಭೆ

ನಾಲ್ಕು ದಿನಗಳ ಕಾಲ ನಡೆಯುತಿದ್ದ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕವಲ್ಲದೆ ತಮಿಳುನಾಡಿನ ಲಕ್ಷಾಂತರ ಭಕ್ತರು ಪ್ರತಿ ವರ್ಷ ಪಾಲ್ಗೊಳ್ಳುತ್ತಿದ್ದರು. ಕೋವಿಡ್‌ನಿಂದಾಗಿ ಕಳೆದ ವರ್ಷವೂ ಜಾತ್ರೆ ರದ್ದಾಗಿತ್ತು. ಈ ಬಾರಿಯೂ ಯುಗಾದಿ ರಥೋತ್ಸವ ನಡೆಯುತ್ತಿಲ್ಲ. ಹೀಗಾಗಿ ಸತತ ಎರಡು ವರ್ಷ ಯುಗಾದಿ ಜಾತ್ರೆ ನಡೆಯದಂತಾಗಿದೆ.

Advertisement

ಶನಿವಾರ ಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನದ ಸೇವೆ, ಏ. 11ರ ಭಾನುವಾರ ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ. ಹೊರಗಿನ ಯಾವ ಭಕ್ತಾದಿಗಳಿಗೂ ದರ್ಶನ, ದಾಸೋಹ ಅಥವಾ ತಂಗುವಿಕೆಗೆ ಅವಕಾಶವಿಲ್ಲ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next