Advertisement
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಾಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುತ್ತಾ ಬರಲಾಗಿದ್ದು, ಈವರೆಗೆ ಪ್ರತಿ ಲಾಡುಗೆ 20ರೂಗಳಂತೆ ಮಾರಾಟ ಮಾಡಲಾಗುತಿತ್ತು. ಇದೀಗ ಪ್ರತಿ ಲಾಡಿನ ಬೆಲೆಯನ್ನು 25ರೂಗಳಿಗೆ ಏರಿಕೆ ಮಾಡಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶ ಹೊರಡಿಸಿದ್ದಾರೆ.
Related Articles
Advertisement
ಲಾಡು ತಯಾರಿಕೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಖಾಯಂ ಸಿಬ್ಬಂದಿಗಳ ವೇತನ 6ನೇ ವೇತನ ಆಯೋಗದ ಮಾನದಂಡದಲ್ಲಿ ವಿತರಿಸಲಾಗುತ್ತಿದ್ದು ಶೇ.35ರಷ್ಟು ಹೆಚ್ಚಳವಾಗಿದೆ. ಅಲ್ಲದೆ ದಿನಗೂಲಿ ನೌಕರರ ವೇತನವೂ ಶೇ.30ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆ ಲಾಡಿನ ದರವನ್ನು ಹೆಚ್ಚಳ ಮಾಡಿ ಪ್ರತಿ 100ಗ್ರಾಂ ತೂಕದ ಲಾಡಿಗೆ 25ರೂ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಕಾವೇರಿ ನದಿಯಲ್ಲಿ ಪ್ರಿವೆಡ್ಡಿಂಗ್ ಫೋಟೊಶೂಟ್: ತೆಪ್ಪ ಮುಳುಗಿ ಜೋಡಿ ಸಾವು
ಲಾಡು ತಯಾರಿಕೆಯ ಕಚ್ಚಾ ಸಾಮಾಗ್ರಿ, ಸಿಬ್ಬಂದಿ ವೇತನ ಸೇರಿದಂತೆ ತಯಾರಿಕೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆ ಕನಿಷ್ಠ ಲಾಭಾಂಶವೂ ಇಲ್ಲದೆ ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಲಾಡಿನ ದರವನ್ನು 25ರೂ.ಗೆ ಹೆಚ್ಚಳ ಮಾಡಲಾಗಿದ್ದು ಭಕ್ತಾದಿಗಳು ಸಹಕರಿಸಬೇಕು.
-ಜಯವಿಭವಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ