Advertisement

ಮಲೇಶ್ಯ ಮಾಸ್ಟರ್: ಸೈನಾ ಸೆಮಿಫೈನಲ್‌ಗೆ

03:45 AM Jan 21, 2017 | Team Udayavani |

ಸರವಾಕ್‌ (ಮಲೇಶ್ಯ): ಗೆಲುವಿನ ಅಭಿಯಾನ ಮುಂದುವರಿಸಿರುವ ಭಾರತೀಯ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಮಲೇಶ್ಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ ಭಾರತದ ಮತ್ತೂಬ್ಬ ಆಟಗಾರ ಅಜಯ್‌ ಜಯರಾಮ್‌ ಸೋತು ಕೂಟದಿಂದ ಹೊರಬಿದ್ದಿದ್ದಾರೆ.

Advertisement

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೈನಾ 21-15, 21-14ರಿಂದ ಇಂಡೋನೇಶ್ಯದ ಫಿಟ್ರಿಯಾನಿ ವಿರುದ್ಧ ಜಯ ಸಾಧಿಸಿದರು. ಶನಿವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಸೈನಾ ಮಲೇಶ್ಯದ ಯುಯಿ ಪುಯಿ ಯಿನ್‌ ವಿರುದ್ಧ ಸೆಣಸಲಿದ್ದಾರೆ. ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಟೂರ್ನಿಯ 6ನೇ ಶ್ರೇಯಾಂಕಿತ ಅಜಯ್‌ ಜಯರಾಮ್‌ 13-21, 8-21ರಿಂದ ಶ್ರೇಯಾಂಕ ರಹಿತ ಆಟಗಾರ ಇಂಡೋನೇಶ್ಯದ ಆ್ಯಂಟನಿ ಸಿನಿಸುಕ್‌ ವಿರುದ್ಧ ಸೋಲುಂಡರು.

Advertisement

Udayavani is now on Telegram. Click here to join our channel and stay updated with the latest news.

Next