Advertisement

ಇತಿಹಾಸ ಸೇರಲಿದೆಯೇ ಮಲೇಶ್ಯ ಕ್ರಿಕೆಟ್‌ ಮೈದಾನ?

06:00 AM Oct 23, 2018 | |

ಕೌಲಾಲಂಪುರ: ಹಲವು ಮಹತ್ವದ ಕ್ರಿಕೆಟ್‌ ಪಂದ್ಯಗಳಿಗೆ ಸಾಕ್ಷಿಯಾಗಿದ್ದ ಇಲ್ಲಿನ ಕಿನ್ರಾರ ಓವಲ್‌ ಕ್ರಿಕೆಟ್‌ ಸ್ಟೇಡಿಯಂ ಇನ್ನು ಬರೀ ನೆನಪಾಗಿ ಉಳಿಯುವ ಸಾಧ್ಯತೆಯೊಂದು ಕಿಗೋಚರಿಸಿದೆ. ಈ ಮೈದಾನವನ್ನು ಮಲೇಶ್ಯ ಕ್ರಿಕೆಟ್‌ ಸಂಸ್ಥೆ ಲೀಸ್‌ಗೆ ಪಡೆದುಕೊಂಡು ಅಭಿವೃದ್ಧಿಪಡಿಸಿತ್ತು. ಅದರ ಅವಧಿ ಮುಗಿದಿರುವುದರಿಂದ ಇದರ ಮಾಲಕರು ಮೈದಾನದಲ್ಲಿ ಬೇರೆ ಬೇರೆ ಚಟುವಟಿಕೆ ನಡೆಸಲು ನಿರ್ಧರಿಸಿದ್ದಾರೆ. ಆದ್ದರಿಂದ ಮೈದಾನವನ್ನು ತಿಂಗಳ ಅಂತ್ಯಕ್ಕೆ ಬಿಟ್ಟುಕೊಡಲು ಮಲೇಶ್ಯ ಕ್ರಿಕೆಟ್‌ ಸಂಸ್ಥೆಗೆ ಸೂಚಿಸಲಾಗಿದೆ.

Advertisement

2003ರಲ್ಲಿ ಕಿನ್ರಾರ ಮೈದಾನ ಸಿದ್ಧವಾಗಿತ್ತು. ಭಾರತ, ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌ ತಂಡಗಳು ಪಾಲ್ಗೊಂಡಿದ್ದ ಏಕದಿನ ಪಂದ್ಯಗಳಿಗೆ ಈ ಮೈದಾನ ಆತಿಥ್ಯ ವಹಿಸಿತ್ತು. ಅಂಡರ್‌-19 ವಿಶ್ವಕಪ್‌ ಪಂದ್ಯಗಳೂ ನಡೆದಿದ್ದವು. ಸಚಿನ್‌ ತೆಂಡುಲ್ಕರ್‌ 2006ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇದೇ ಮೈದಾನದಲ್ಲಿ ಅಜೇಯ 141 ಬಾರಿಸಿದ್ದರು. ವಿಶ್ವದರ್ಜೆಯ ಸೌಲಭ್ಯಗಳನ್ನೂ ಇದು ಹೊಂದಿದೆ.  ಆದರೆ ಇದನ್ನೀಗ ಕಳೆದುಕೊಳ್ಳುವ ಅನಿವಾರ್ಯತೆಯಲ್ಲಿ ಮಲೇಶ್ಯ ಕ್ರಿಕೆಟ್‌ ಮಂಡಳಿಯಿದೆ. ಸದ್ಯ ಮೈದಾನ ವನ್ನು ಉಳಿಸಿಕೊಳ್ಳಬೇಕಾದರೆ ಸ್ವತಃ ಐಸಿಸಿಯೇ ಕಾರ್ಯಪ್ರವೃತ್ತವಾಗ ಬೇಕಾಗಿದೆ. ಐಸಿಸಿ ಯಾವ ಹೆಜ್ಜೆ ಇಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next