Advertisement

ಮಲೇಷ್ಯಾ ಓಪನ್‌: ವಿಶ್ರಾಂತಿ ಬಳಿಕ ಸಿಂಧು ಕಣಕ್ಕೆ

11:24 PM Jan 09, 2023 | Team Udayavani |

ಕೌಲಾಲಂಪುರ: ಐದು ತಿಂಗಳ “ಇಂಜ್ಯುರಿ ಬ್ರೇಕ್‌’ ಬಳಿಕ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಶಟ್ಲ ಕೋರ್ಟ್‌ಗೆ ಮರಳಲಿದ್ದಾರೆ. ಮಂಗಳವಾರ ಆರಂಭವಾಗಲಿರುವ “ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಆಡಲಿದ್ದು, ಮೊದಲ ಸುತ್ತಿನಲ್ಲೇ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ಸವಾಲನ್ನು ಎದುರಿಸುವರು.

Advertisement

ಭಾರತೀಯ ಆಟಗಾರ್ತಿ ವಿರುದ್ಧ ಮರಿನ್‌ 9-5ರ ಗೆಲುವಿನ ದಾಖಲೆ ಹೊಂದಿ ದ್ದಾರೆ. ಕಳೆದ ಮೂರೂ ಪಂದ್ಯಗಳಲ್ಲಿ ಸಿಂಧು ಅವರಿಗೆ ಸೋಲುಣಿಸಿದ್ದಾರೆ. ಸೈನಾ ನೆಹ್ವಾಲ್‌, ಅಕರ್ಷಿ ಕಶ್ಯಪ್‌, ಮಾಳವಿಕಾ ಬನ್ಸೋಡ್‌ ವನಿತಾ ವಿಭಾಗದ ಉಳಿದ ಪ್ರಮುಖರು.

ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌ ಕೂಡ ಕೌಲಾಲಂಪುರದಲ್ಲಿ ಆಡಲಿದ್ದಾರೆ. ಇವರಿಬ್ಬರೂ ಮೊದಲ ಸುತ್ತಿನಲ್ಲೇ ಮುಖಾಮುಖೀ ಆಗುವ ಕಾರಣ ಒಬ್ಬರು ಮನೆಯ ಹಾದಿ ಹಿಡಿಯಲೇಬೇಕಿದೆ. ಕೆ. ಶ್ರೀಕಾಂತ್‌ ಜಪಾನ್‌ನ
ಕೆಂಟ ನಿಶಿಮೊಟೊ ವಿರುದ್ಧ ಆಡುವರು. ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಅವರ ಮೊದಲ ಸುತ್ತಿನ ಎದುರಾಳಿ ದಕ್ಷಿಣ ಕೊರಿಯಾದ ಚೊç ಸೊಲ್‌ ಗ್ಯು-ಕಿಮ್‌ ವಾನ್‌ ಹೊ.

ವಿಶ್ವದ ಖ್ಯಾತ ಶಟ್ಲರ್‌ಗಳಾದ ನಂ.1 ವಿಕ್ಟರ್‌ ಅಕ್ಸೆಲ್ಸೆನ್‌, ತವರಿನ ಲೀ ಜೀ ಜಿಯ, ಅಕಾನೆ ಯಮಾಗುಚಿ, ತೈ ಜು ಯಿಂಗ್‌ ಕೂಡ ಇಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಹಾತೊರೆಯುತ್ತಿದ್ದಾರೆ.

2022ರಲ್ಲಿ ಭರ್ಜರಿ ಯಶಸ್ಸು ಕಂಡ ಭಾರತೀಯ ಬ್ಯಾಡ್ಮಿಂಟನ್‌, 2023ರಲ್ಲೂ ಇದೇ ಲಯದಲ್ಲಿ ಸಾಗಬೇಕಾದ ಅಗತ್ಯವಿದೆ. ಮೇ ತಿಂಗಳಿಂದ ಪ್ಯಾರಿಸ್‌ ಒಲಿಂಪಿಕ್‌ ಅರ್ಹತಾ ಅವಧಿ ಪ್ರಾರಂಭವಾಗುವುದೇ ಇದಕ್ಕೆ ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next