Advertisement

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ ಪ್ರವೇಶ

11:00 PM Jan 13, 2023 | Team Udayavani |

ಕೌಲಾಲಂಪುರ: “ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಶುಕ್ರವಾರ ಭಾರತ ಮಿಶ್ರ ಫ‌ಲಿತಾಂಶ ದಾಖಲಿಸಿದೆ.

Advertisement

ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ ಸೆಮಿಫೈನಲ್‌ ಪ್ರವೇಶಿಸಿದರೆ, ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಪರಾಭವಗೊಂಡರು.

ಚಿರಾಗ್‌-ಸಾತ್ವಿಕ್‌ ಸೇರಿಕೊಂಡು ಬಿ.ಡಬ್ಲ್ಯು.ಎಫ್. ವರ್ಲ್ಡ್ ಟೂರ್‌ ಫೈನಲ್ಸ್‌ ಚಾಂಪಿಯನ್‌ಗಳಾದ ಚೀನದ ಲಿಯು ಯು ಚೆನ್‌-ಒಯು ಕ್ಸುವಾನ್‌ ಯಿ ಅವರನ್ನು 17-21, 22-20, 21-9 ಅಂತರದಿಂದ ಬಗ್ಗುಬಡಿದರು.

ಆಟ ಮುಗಿಸಿದ ಪ್ರಣಯ್‌
ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ವಿಶ್ವದ 7ನೇ ರ್‍ಯಾಂಕಿಂಗ್‌ ಆಟಗಾರ ಕೊಡೈ ನರವೋಕ ವಿರುದ್ಧ 84 ನಿಮಿಷಗಳ ಕಾಲ ಹೋರಾಟ ನಡೆಸಿದ ಪ್ರಣಯ್‌, ಅಂತಿಮವಾಗಿ 16-21, 21-19, 10-21 ಅಂತರದಿಂದ ಸೋತರು.
ಇದರೊಂದಿಗೆ ಪ್ರಣಯ್‌ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ನರವೋಕ ಗೆದ್ದಂತಾಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next