Advertisement

ಮಲೇಶ್ಯ ಓಪನ್‌: ಸೈನಾ ಆಕರ್ಷಣೆ

01:05 AM Jan 15, 2019 | |

ಕೌಲಾಲಂಪುರ: ಮಂಗಳವಾರದಿಂದ ಕೌಲಾಲಂಪುರಲ್ಲಿ ಆರಂಭವಾಗಲಿರುವ “ಮಲೇಶ್ಯನ್‌ ಓಪನ್‌ ವರ್ಲ್ಡ್ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌’ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌, ಕಿಡಂಬಿ ಶ್ರೀಕಾಂತ್‌ ಭಾರತದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

Advertisement

ಶ್ರೀಕಾಂತ್‌ ಬುಧವಾರ ಕಣಕ್ಕಿಳಿಯಲಿದ್ದು, ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್‌ ಅಂಗುಸ್‌ ವಿರುದ್ಧ ಆಡಲಿದ್ದಾರೆ. ಸೈನಾ ನೆಹ್ವಾಲ್‌ ಕೂಡ ಹಾಂಕಾಂಗ್‌ ಆಟಗಾರ್ತಿ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ಬಿಬಿಎಲ್‌ನಲ್ಲಿ ಚಾಂಪಿಯನ್‌ ಬೆಂಗಳೂರು ರಾಪ್ಟರ್ ಪರ ಆಡಿದ ಬಿ. ಸಾಯಿ ಪ್ರಣೀತ್‌ ಈ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಸೆಣಸಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಸ್ಪರ್ಧೆಯಲ್ಲಿದ್ದಾರೆ.

ಪಾರುಪಳ್ಳಿ ಕಶ್ಯಪ್‌, ಅಜಯ್‌ ಜಯರಾಮ್‌, ಶುಭಂಕರ್‌ ಡೇ ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಿನಲ್ಲಿ ಆಡುವರು.

Advertisement

Udayavani is now on Telegram. Click here to join our channel and stay updated with the latest news.

Next