ಕೌಲಾಲಂಪುರ: ಎಚ್.ಎಸ್. ಪ್ರಣಯ್ ಮತ್ತು ಪಿ.ವಿ. ಸಿಂಧು “ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪಿ. ಕಶ್ಯಪ್ ಪರಾ ಭವಗೊಂದರೆ, ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಗಾಯಾಳಾದ್ದರಿಂದ ಡಬಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದರು.
ಶ್ರೇಯಾಂಕ ರಹಿತ ಶಟ್ಲರ್ ಪ್ರಣಯ್ ವಿಶ್ವದ 4ನೇ ರ್‍ಯಾಂಕಿಂಗ್ ಆಟಗಾರ ಚೀನದ ಚೌ ಟೀನ್ ಚೆನ್ ಅವರನ್ನು 21-15, 21-7 ನೇರ ಗೇಮ್‌ಗಳಲ್ಲಿ ಸೋಲಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದರು. ಕಳೆದ ವಾರ “ಇಂಡೋನೇಷ್ಯಾ ಬ್ಯಾಡ್ಮಿಂಟನ್’ ಕೂಟದ ಸೆಮಿಫೈನಲ್ ತನಕ ಸಾಗಿದ್ದ ಪ್ರಣಯ್ ಅವರಿನ್ನು ಇಂಡೋನೇಷ್ಯಾದ 7ನೇ ಶ್ರೇಯಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ ವಿರುದ್ಧ ಆಡಲಿದ್ದಾರೆ. ಕ್ರಿಸ್ಟಿ ಎದುರಿನ 8 ಪಂದ್ಯಗಳಲ್ಲಿ ಪ್ರಣಯ್ ಮೂರನ್ನು ಗೆದ್ದಿದ್ದಾರೆ.
ಪಿ. ಕಶ್ಯಪ್ ಅವರನ್ನು ಥಾಯ್ಲೆಂಡ್‌ನ ಕುನಾÉವುತ್ ವಿದಿತ್ಸಣ್ì 21-19, 21-10ರಿಂದ ಪರಾಭವಗೊಳಿಸಿದರು.
3 ಗೇಮ್ ಹೋರಾಟ :
ಪಿ.ವಿ. ಸಿಂಧು ಥಾಯ್ಲೆಂಡ್‌ನ ಯುವ ಆಟಗಾರ್ತಿ ಪಿಟ್ಟಾಯಪೋರ್ನ್ ಚೈವಾನ್ ವಿರುದ್ಧ 3 ಗೇಮ್‌ಗಳ ಹೋರಾಟ ಕಾಣಬೇಕಾಯಿತು. ಮೊದಲ ಗೇಮ್ 19-21ರಿಂದ ಕೈಜಾರಿದ ಬಳಿಕ ತಿರುಗಿ ಬಿದ್ದರು. 21-9, 21-14ರ ಮೇಲುಗೈ ಸಾಧಿಸಿದರು. ಇವರ ಹೋರಾಟ 57 ನಿಮಿಷಗಳ ಕಾಲ ಸಾಗಿತು. ಅಂದಹಾಗೆ ಚೈವಾನ್ ವಿರುದ್ಧ ಸಿಂಧು ಆಡಿದ ಮೊದಲ ಪಂದ್ಯ ಇದಾಗಿತ್ತು.
ಸಿಂಧು ಅವರ ಕ್ವಾರ್ಟರ್ ಫೈನಲ್ ಎದುರಾಳಿ ಚೈನೀಸ್ ತೈಪೆಯ ತೈ ಜು ಯಿಂಗ್. ಇವರೆದುರು ಸಿಂಧು 5-15ರ ಹಿನ್ನಡೆಯಲ್ಲಿದ್ದಾರೆ.