ಕೌಲಾಲಂಪುರ: ಶಟ್ಲರ್ ಎಚ್.ಎಸ್. ಪ್ರಣಯ್ ಕಠಿನ ಹೋರಾಟದಲ್ಲಿ ಸ್ಥಳೀಯ ಹೀರೋ ಡ್ಯಾರೆನ್ ಲೀವ್ ಅವರನ್ನು ಕೆಡಹಿ ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದೇ ವೇಳೆ ಬಿ. ಸಾಯಿ ಪ್ರಣೀತ್ ಮತ್ತು ಸಮೀರ್ ವರ್ಮ ಸೋತು ಹೊರಬಿದ್ದಿದ್ದಾರೆ.
ಪ್ರಣಯ್ 21-14, 17-21, 21-18 ಗೇಮ್‌ಗಳಿಂದ ಲೀವ್ ಅವರನ್ನು ಸೋಲಿಸಿದರು. ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಶ್ಯದ ಜೋಡಿಯನ್ನು 21-18, 21-11 ಗೇಮ್‌ಗಳಿಂದ ಸೋಲಿ ಸಿದ್ದಾರೆ. ಆದರೆ ಸಾಯಿ ಪ್ರಣೀತ್ ಇಂಡೋನೇಶ್ಯದ ಅಂತೋನಿ ಜಿಂಟಿಂಗ್ ಅವರೆದುರು 15-21, 21-19, 9-21 ಗೇಮ್‌ಗಳಿಂದ ಸೋತು ಹೊರಬಿದ್ದರು.
ಇದನ್ನೂ ಓದಿ:ಟೆಸ್ಟ್ ಪಂದ್ಯ: ಇಂಗ್ಲೆಂಡ್ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್ ಮರಿಝಾನೆ ಕ್ಯಾಪ್ ಶತಕ
ಇನ್ನೊಂದು ಪಂದ್ಯದಲ್ಲಿ ಸಮೀರ್ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟೀ ಅವರಿಗೆ 14-21, 21-13, 7-21 ಗೇಮ್‌ಗಳಿಂದ ಶರಣಾದರು.