Advertisement

ಮಲಯಾಳಂ ಚಲನಚಿತ್ರ “ಜಲ್ಲಿಕಟ್ಟು” ಗೆ ಕೈ ತಪ್ಪಿದ ಆಸ್ಕರ್  

05:41 PM Feb 10, 2021 | Team Udayavani |

ಕ್ಯಾಲಿಫೋರ್ನಿಯಾ :  ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದು ಅಂತರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಪ್ರವೇಶ ಪಡೆದ ಭಾರತೀಯ ಮಲಯಾಳಂ ಚಲನಚಿತ್ರ “ಜಲ್ಲಿಕಟ್ಟು” 93 ನೇ ಅಕಾಡೆಮಿ ಅವಾರ್ಡ್ ಗೆ ಆಯ್ಕೆಯಾಗದೇ ವಿಫಲವಾಗಿದೆ.

Advertisement

ಬುಧವಾರ(ಫೆ.10)ದಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಹಾಗೂ ಸೈನ್ಸ್ ಹೊರಡಿಸಿದ 9 ವಿಭಾಗಗಳ ಶಾರ್ಟ್ ಲಿಸ್ಟ್ ನಿಂದ ಲಿಜೊ ಜೋಸ್ ಪೆಲ್ಲಿಸ್ಸೆರಿ ಅವರ ಮಲಯಾಳಂ ಚಿತ್ರ “ಜಲ್ಲಿಕಟ್ಟು” ಹೊರಗುಳಿದಿದೆ.

ಓದಿ : “ಇ’ವಾಹನಗಳತ್ತ ಜನರ ಚಿತ್ತ

ಅಕಾಡೆಮಿ ಬಿಡುಗಡೆಗೊಳಿಸಿದ ಶಾರ್ಟ್ ಲಿಸ್ಟ್ ನಲ್ಲಿ  15 ಚಲನಚಿತ್ರಗಳು ಮುಂದಿನ ಸುತ್ತಿಗೆ ಆಯ್ಕೆಗೊಂಡಿವೆ. 93 ದೇಶಗಳ ಚಲನಚಿತ್ರಗಳು ಅಕಾಡೆಮಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.

ಹರೀಶ್ ಅವರ Maoist(ಮಾವೋವಾದಿ) ಎಂಬ ಸಣ್ಣ ಕಥೆಯಾಧಾರಿತ “ಜಲ್ಲಿಕಟ್ಟು” ಚಿತ್ರದಲ್ಲಿ ಆ್ಯಂಟೋನಿ ವಾರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮೊನ್ ಅಬ್ದುಸಮದ್, ಸಂತಿ ಬಾಲಚಂದ್ರನ್ ಒಳಗೊಂಡ ದೊಡ್ಡ ತಾರಾಗಣವೇ ಇದ್ದಿತ್ತು.

Advertisement

ಕೇರಳದ ಖಸಾಯಿಕಾನೆಯೊಂದರಿಂದ ಅಪಹರಿಸಲ್ಪಟ್ಟ ಒಂದು ಎಮ್ಮೆಯ ಸುತ್ತ ಕಥೆ ನಡೆಯುತ್ತದೆ. ಅದರ ಬೆನ್ನು ಹಿಡಿದ ಪಟ್ಟಣವಾಸಿಗಳಿಂದ ಗದ್ದಲ ಸೃಷ್ಟಿಯಾಗುತ್ತದೆ. ಇಡೀ ಚಿತ್ರದಲ್ಲಿ ಕಥಾವಸ್ತು ಮಾನವೀಯತೆಯ ಕರಾಳ ಮುಖವನ್ನು ತೋರಿಸುತ್ತದೆ.

ಇನ್ನು, ಆಸ್ಕರ್ ಪ್ರಶಸ್ತಿಗಾಗಿ ಅಂತಿಮ ನಾಮಪತ್ರಗಳನ್ನು ಮಾರ್ಚ್ 15 2021ರಂದು ಘೋಷಿಸಲಾಗುತ್ತದೆ. ಏಪ್ರಿಲ್ 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಓದಿ : ಮೆಡಿಕಲ್‌ ಕಾಲೇಜಿಗೆ ಡೀನ್‌ ನೇಮಕಕ್ಕೆ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next