Advertisement

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

06:12 PM May 21, 2024 | Team Udayavani |

ಕೊಚ್ಚಿ: ಸಿನಿಮಾರಂಗದಲ್ಲಿ ಕಾಲಿವುಡ್‌, ಟಾಲಿವುಡ್‌ , ಬಾಲಿವುಡ್‌ ಹಾಗೂ ಸ್ಯಾಂಡಲ್‌ ವುಡ್‌ ಮಾಡದ ಸಾಧನೆಯನ್ನು ವರ್ಷದ ಕಳೆದ ಐದು ತಿಂಗಳಿನಲ್ಲಿ ಮಾಲಿವುಡ್‌ ಮಾಡಿ ತೋರಿಸಿದೆ. ಬಾಕ್ಸ್‌ ಆಫೀಸ್‌ ನಲ್ಲಿ ಮಲಯಾಳಂ ಸಿನಿಮಾಗಳು ಮೊಟ್ಟೆಯಿಡುವ ಚಿನ್ನದ ಕೋಳಿಗಳಾಗಿವೆ ಎಂದರೆ ತಪ್ಪಾಗದು.

Advertisement

2024ರ ವರ್ಷ ಮಾಲಿವುಡ್‌ ಗೆ ಚಿತ್ರರಂಗಕ್ಕೆ ಇದುವರೆಗೆ ಗೋಲ್ಡನ್‌ ಮೊಮೆಂಟ್‌ ಎಂದೇ ಹೇಳಬಹುದು. ವರ್ಲ್ಡ್‌ ವೈಡ್‌ ಮಲಯಾಳಂ ಸಿನಿಮಾಗಳು ಐದೇ ಐದು ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ.

ವಿಶೇಷವೆಂದರೆ ಈ 1000 ಕೋಟಿಯಲ್ಲಿ ಮೂರು ಸಿನಿಮಾಗಳು ಅತೀ ಹೆಚ್ಚು ಗಳಿಕೆಯನ್ನು ತಂದುಕೊಟ್ಟಿದೆ.

ಈ ಮೈಲಿಗಲ್ಲಿಗೆ ಮೂರು ಸಿನಿಮಾಗಳು  ಗಮನಾರ್ಹವಾಗಿ ಕೊಡುಗೆ ನೀಡಿವೆ. ಒಟ್ಟು ಆದಾಯದಲ್ಲಿ 55% ರಷ್ಟು ಈ ಮೂರು ಸಿನಿಮಾದಿಂದ ಬಂದಿದೆ ಎಂದು ʼಆನ್ ಮನೋರಮಾʼ ವರದಿ ತಿಳಿಸಿದೆ.

ಇದರಲ್ಲಿ ಮುಂಚೂಣಿಯಲ್ಲಿ ಬರುವ ಚಿತ್ರವೆಂದರೆ ಅದು ‘ಮಂಜುಮ್ಮೆಲ್ ಬಾಯ್ಸ್ʼ. ಈ ಚಿತ್ರಕ್ಕೆ ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ವರ್ಲ್ಡ್‌ ವೈಡ್ ‘ಮಂಜುಮ್ಮೆಲ್ ಬಾಯ್ಸ್ʼ 240.94 ಕೋಟಿ ರೂ. ಗಳಿಸಿದೆ.

Advertisement

ಇನ್ನು ಎರಡನೇಯದಾಗಿ ಪೃಥ್ವಿರಾಜ್ ಸುಕುಮಾರನ್ ಅವರ ʼಆಡುಜೀವಿತಂʼ ಮಾಲಿವುಡ್‌ ನಲ್ಲಿ ಮೋಡಿ ಮಾಡಿತು. 157.44 ಕೋಟಿ ರೂ. ಗಳಿಕೆ ಕಾಣುವ ಮೂಲಕ ದೊಡ್ಡ ಹಿಟ್‌ ಆಗಿ ಹೊರಹೊಮ್ಮಿತು.  ಇನ್ನು ಫಾಹದ್‌ ಫಾಸಿಲ್‌ ಅವರ ಕಾಮಿಡಿ ಕಥಾಹಂದರ ʼಆವೇಶಮ್‌ʼ ಕೂಡ 1000 ಕೋಟಿಗೆ ತನ್ನ ಕೊಡುಗೆಯನ್ನು ನೀಡಿದೆ. ಈ ಚಿತ್ರ ಒಟ್ಟು 153.52 ಕೋಟಿ ರೂಪಾಯಿಯ ಗಳಿಕೆ ಕಂಡಿದೆ.

ಈ ಮೂರು ಚಿತ್ರಗಳು ಸೇರಿ ಒಟ್ಟು 551 ಕೋಟಿ ರೂ.ಗಳಿಸಿದೆ. ಏಪ್ರಿಲ್ ಅಂತ್ಯದ ವೇಳೆಗೆ ಮಲಯಾಳಂ ಚಿತ್ರರಂಗ ವಿಶ್ವಾದ್ಯಂತ 985 ಕೋಟಿ ರೂ. ಗಳಿಕೆ ಕಂಡಿತ್ತು.

ಇತ್ತೀಚೆಗೆ ಬಂದಿರುವ ಪೃಥ್ವಿರಾಜ್‌ ಅಭಿನಯದ ʼಗುರುವಾಯೂರ್ ಅಮಬಲನಾಡಾಯಿಲ್ʼ ಕೆಲವೇ ದಿನಗಳಲ್ಲಿ 50 ಕೋಟಿ ಗಳಿಕೆ ಕಂಡಿದೆ. ಆ ಮೂಲಕ ಮಾಲಿವುಡ್‌ ಚಿತ್ರರಂಗ 1000 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

2024ರಲ್ಲಿ ಭಾರತೀಯ ಸಿನಿಮಾರಂಗಕ್ಕೆ ಮಾಲಿವುಡ್‌ ಒಂದೇ ಇದುವರೆಗೆ ಶೇ.20 ರಷ್ಟು ಕೊಡುಗೆಯನ್ನು ನೀಡಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವ ಸಿನಿಮಾಗಳೆಂದರೆ ʼಆಡುಜೇವಿತಂʼ, ʼಆವೇಶಮ್‌ʼ, ʼಪ್ರೇಮಲುʼ, ʼಮಂಜುಮ್ಮೆಲ್ ಬಾಯ್ಸ್ʼ ಹಾಗೂ ʼಭ್ರಮಯುಗಂʼ.

2023 ರಲ್ಲಿ ʼಕಣ್ಣೂರು ಸ್ಕ್ಯಾಡ್‌ʼ, ʼಆರ್‌ ಡಿಎಕ್ಸ್‌ʼ, ʼನೆರೂʼ, ʼರೋಮಚಂʼ, ‘ರೋಮಾಂಚಮ್’ ಸೇರಿ ಒಟ್ಟು 500 ಕೋಟಿ ಬ್ಯುಸಿನೆಸ್‌ ಮಾಡಿತ್ತು.

ಇದು ಯಶಸ್ಸಿನ ಆರಂಭವೆಂದರೆ ತಪ್ಪಾಗದು. ಏಕೆಂದರೆ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್‌ ಗೆ ಕಾದುಕುಳಿತಿದೆ.  ‘L2: ಎಂಪುರಾನ್’, ‘ಬರೋಜ್’, ‘ಟರ್ಬೋ’, ‘ಅಜಯಂತೇ ರಾಂಡಮ್ ಮೋಷನಂ’, ‘ಕಥನಾರ್: ದಿ ವೈಲ್ಡ್ ಸೋರ್ಸೆರರ್’.. ಸೇರಿದಂತೆ ಅನೇಕ ಚಿತ್ರಗಳು ಈ ವರ್ಷವೇ ರಿಲೀಸ್‌ ಆಗುವ ಸಾಧ್ಯತೆಯಿದೆ. ಹಾಗಾಗಿ ಈ ಸಿನಿಮಾಗಳು ಕೂಡ ಕೋಟಿ ಕಮಾಯಿ ಮಾಡಿದರೆ ಅಚ್ಚರಿ ಪಡಬೇಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next