Advertisement

ಮಲಯಾಳಿ ಸೌಮ್ಯ ಕನ್ನಡ ಎಂಟ್ರಿ

11:23 AM Aug 24, 2021 | Team Udayavani |

ಕನ್ನಡಕ್ಕೆ ಈಗಾಗಲೇ ಸಾಕಷ್ಟು ಮಲಯಾಳಿ ನಟಿಯರ ಆಗಮನವಾಗಿದೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಸೌಮ್ಯ ಮೆನನ್‌. ನಿರಂಜನ್‌ ನಾಯಕರಾಗಿರುವ “ಹಂಟರ್‌’ ಚಿತ್ರಕ್ಕೆ ಸೌಮ್ಯ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

Advertisement

ಈಗಾಗಲೇ ಮಲಯಾಳಂನಲ್ಲಿ ಐದಾರು ಸಿನಿಮಾ ಮಾಡಿರುವ ಸೌಮ್ಯಗೆ “ಹಂಟರ್‌’ ಮೊದಲ ಸಿನಿಮಾ. ಈ ಹಿಂದೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಚಿರು ಸರ್ಜಾ ಅಭಿನಯದ “ಸೀಜರ್‌’ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್‌ ಕೃಷ್ಣ ಈ ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:ನಾಲ್ಕು ವರ್ಷಗಳಿಂದ ಚಿಂಪಾಂಜಿ ಜತೆ ಮಹಿಳೆಯ ಲವ್‌ ಅಫೇರ್‌!

ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಥ್ರಿಲ್ಲರ್‌ ಕಥಾ ಹಂದರದ ಈ ಚಿತ್ರವನ್ನು “ತ್ರಿವಿಕ್ರಮ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ ನಲ್ಲಿ ತ್ರಿವಿಕ್ರಮ್‌ ಸಾಫ‌ಲ್ಯ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next