Advertisement

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

02:27 PM Dec 17, 2024 | Team Udayavani |

ಕೊಚ್ಚಿ: ಮಾಲಿವುಡ್‌ ಚಿತ್ರರಂಗದ ಹಿರಿಯ ನಟ ಥಾಮಸ್ ಬರ್ಲೀ ಕುರಿಶಿಂಗಲ್ (Thomas Burleigh Kurishingal) ಮಂಗಳವಾರ (ಡಿ.17 ರಂದು) ನಿಧನ ಹೊಂದಿದರು.

Advertisement

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಥಾಮಸ್ ಬರ್ಲೀ (94) ಚಿಕಿತ್ಸೆ ಪಡೆಯುತ್ತಿದ್ದರು.

ಚಿತ್ರರಂಗ: ಥಾಮಸ್ 1953 ರಲ್ಲಿ ಮಲಯಾಳಂ ಚಲನಚಿತ್ರಗಳಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 21ರ ವಯಸ್ಸಿನಲ್ಲಿ ಸತ್ಯನ್ ಜೊತೆಗೆ ಮಲಯಾಳಂ ಚಿತ್ರ ತಿರಮಲ (1953)ದಲ್ಲಿ ನಾಯಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಕೊಚ್ಚಿಯಲ್ಲಿ ಸೆಪ್ಟೆಂಬರ್ 1, 1932 ರಂದು ಜನಿಸಿದ ಥಾಮಸ್ ಬರ್ಲೀ ಕುರಿಶಿಂಗಲ್ ಬಹು ಪ್ರತಿಭೆಯಿಂದ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಪಡೆದಿದ್ದರು.

Advertisement

ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ನಟನೆಯ ಕೋರ್ಸ್‌ ಮಾಡಿದ ಅವರು ಹಾಲಿವುಡ್‌ನಲ್ಲಿ ನೆವರ್ ಸೋ ಫ್ಯೂ (1959) ಸೇರಿದಂತೆ ಕೆಲ ಟಿವಿ ಶೋಗಳಲ್ಲಿ ಸಣ್ಣ ಪಾತ್ತವನ್ನು ಮಾಡಿದ್ದರು. ಇದಲ್ಲದೆ ಮಕ್ಕಳಿಗಾಗಿ ʼಮಾಯಾʼ ಎಂಬ ಇಂಗ್ಲಿಷ್ ಚಲನಚಿತ್ರವನ್ನು ನಿರ್ಮಿಸಿದ್ದರು.

ಬಹು ಪ್ರತಿಭೆ.. ಥಾಮಸ್‌ ಒಬ್ಬ ನಟ ಮಾತ್ರವಲ್ಲದೆ ಒಬ್ಬ ನುರಿತ ಜಾದೂಗಾರ, ಪಿಟೀಲು ವಾದಕ ಮತ್ತು ವರ್ಣಚಿತ್ರಕಾರ ಮತ್ತು ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.  ಬಿಯಾಂಡ್ ಹಾರ್ಟ್ (2000), ಫ್ರಾಗ್ರ್ಯಾಂಟ್ ಪೆಟಲ್ಸ್ (2004), ಓ ಕೇರಳ (2007), ಕಾರ್ಟೂನ್ ಸೇಕ್ರೆಡ್ ಸ್ಯಾವೇಜ್ (2017) ಮುಂತಾದ ಕೃತಿಗಳನ್ನು ಬರೆದು ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.

1969 ರಲ್ಲಿ ಭಾರತಕ್ಕೆ ಮರಳಿದ ಅವರು ʼಇತು ಮನುಷ್ಯನೋ?ʼ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದಾದ ಬಳಿಕ 1985ರಲ್ಲಿ ʼವೆಲ್ಲರಿಕ್ಕಪ್ಪಟ್ಟಣಂʼ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಥಾಮಸ್‌ ಪತ್ನಿ ಸೋಫಿ ಮಕ್ಕಳಾದ ತಾನ್ಯಾ, ತರುಣ್ ಮತ್ತು ತಮಿನಾ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next