Advertisement

ಮಲಯಾಳಂ ನಟ ಶರತ್‌ ಚಂದ್ರನ್‌ ಆತ್ಮಹತ್ಯೆ

08:59 PM Jul 30, 2022 | Team Udayavani |

ತಿರುವನಂತಪುರಂ: ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟ ಶರತ್‌ ಚಂದ್ರನ್‌ ಕೇರಳದ ಕಕ್ಕಡ್‌ನ‌ ಮನೆಯಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಅನೇಕ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು, ಅದೇ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. “ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಬರೆದಿರುವ ಡೆತ್‌ನೋಟ್‌ ಕೂಡ ಮನೆಯಲ್ಲಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರತ್‌ ಅವರು ಸಿಐಎ, ಅಂಗಮಲ್ಲಿ ಡೈರೀಸ್‌, ಒರು ಮೆಕ್ಸಿಕನ್‌ ಅಪರಥಾ ಸೇರಿ ಅನೇಕ ಸಿನಿಮಾಗಳಲ್ಲಿ ಹಾಗೂ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next