Advertisement

Kantara -1: ರಿಷಬ್‌ ಶೆಟ್ಟಿ ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

04:11 PM May 30, 2024 | Team Udayavani |

ಬೆಂಗಳೂರು: ರಿಷಬ್‌ ಶೆಟ್ಟಿ ಅವರ ʼಕಾಂತಾರ ಪ್ರೀಕ್ವೆಲ್‌ʼ ಅಪ್ಡೇಟ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿ, ಪರಭಾಷೆಗೆ ಡಬ್‌ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ʼಕಾಂತಾರʼ ಮ್ಯಾಜಿಕ್‌ ಮಾಡಿತ್ತು.

Advertisement

20 ಕೋಟಿಯಲ್ಲಿ ನಿರ್ಮಾಣವಾಗಿದ್ದ ʼಕಾಂತಾರʼ 400 ಕೋಟಿ ಗಳಿಕೆ ಕಂಡಿತ್ತು. ಈ ಸಿನಿಮಾದ ಪ್ರೀಕ್ವೆಲ್‌ ಗೆ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತ್ತು. ಬಹಳ ದೊಡ್ಡಮಟ್ಟದಲ್ಲಿ ʼಕಾಂತಾರ -1ʼ ಮೂಡಿ ಬರಲಿದೆ ಎನ್ನುವ ಮಾತಿಗೆ ತಕ್ಕಂತೆ ಸಿನಿಮಾ ತಂಡ ಚಿತ್ರೀಕರಣಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ.

ಇದಕ್ಕಾಗಿ ರಿಷಬ್‌ ತಮ್ಮ ಹುಟ್ಟೂರಿನಲ್ಲೇ ದೊಡ್ಡಮಟ್ಟದ ಸೆಟ್‌ ಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಟೀಸರ್ ತುಣುಕಿನಿಂದ ಗಮನ ಸೆಳೆದಿರುವ ʼಕಾಂತಾರ-1ʼ ನಲ್ಲಿ ರಿಷಬ್‌ ಹೊರತು ಪಡಿಸಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಬಗ್ಗೆ ಇದುವರೆಗೆ ಚಿತ್ರತಂಡದಿಂದ ಯಾವ ಅಪ್ಡೇಟ್‌ ಕೂಡ ಸಿಕ್ಕಿಲ್ಲ.

ಇದನ್ನೂ ಓದಿ: ನಟ ʼಪ್ರಜ್ವಲ್‌ ದೇವರಾಜ್‌ ಇನ್ನಿಲ್ಲʼ ಎನ್ನುವ ಪೋಸ್ಟರ್‌ ವೈರಲ್:‌ ನಿಜಕ್ಕೂ ಆಗಿದ್ದೇನು?

ಕರಾವಳಿ ಭಾಗದ ಕಲಾವಿದರೇ ಹೆಚ್ಚಾಗಿ ಸಿನಿಮಾದಲ್ಲಿರಲಿದ್ದಾರೆ ಎಂದು ರಿಷಬ್‌ ಈ ಹಿಂದೆ ಹೇಳಿದ್ದು ಬಿಟ್ಟರೆ ಯಾರೆಲ್ಲಾ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ.

Advertisement

ಇದೀಗ ಲೇಟೆಸ್ಟ್‌ ಅಪ್ಡೇಟ್‌ ವೊಂದು ಸ್ಯಾಂಡಲ್‌ ವುಡ್‌ ವಲಯದಲ್ಲಿ ಹರಿದಾಡಿದೆ. ʼಕಾಂತಾರ-1ʼ ಖ್ಯಾತ ಬಹುಭಾಷಾ ನಟ ಜಯರಾಂ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಈಗಾಗಲೇ ಶಿವರಾಜ್‌ ಕುಮಾರ್‌ ಅವರ ʼಘೋಸ್ಟ್‌ʼ ಸಿನಿಮಾದಲ್ಲಿ ಖಡಕ್‌ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದ ಜಯರಾಂ ಈಗ ಕರಾವಳಿ ದೈವದ ಕಥೆವುಳ್ಳ ʼಕಾಂತಾರ-1ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇದುವರೆಗೆ ಈ ಬಗ್ಗೆ ರಿಷಬ್‌ ಆಗಲಿ ಅಥವಾ ನಿರ್ಮಾಣ ಸಂಸ್ಥೆ ಹೊಂಬಾಳೆ ಆಗಲಿ ಅಧಿಕೃತವಾಗಿ ಯಾವ ಮಾಹಿತಿಯನ್ನು ನೀಡಿಲ್ಲ.

ಈಗಾಗಲೇ ʼಕಾಂತಾರ-1ʼ ಸಿನಿಮಾದ ಓಟಿಟಿ ರೈಟ್ಸ್‌ ಅಮೇಜಾನ್‌ ಪ್ರೈಮ್‌ ಗೆ 120 ಕೋಟಿ ರೂ.ಗೆ ಸೇಲ್‌ ಆಗಿದೆ. ಮುಂದಿನ ವರ್ಷದ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next