Advertisement

Kollywood: ಫ್ಯಾಮಿಲಿ ಫೋಟೋಸ್‌ ಡಿಲೀಟ್.. ವಿಚ್ಛೇದನ ಹಂತಕ್ಕೆ ಬಂತಾ ನಟ ಜಯಂ ರವಿ ದಾಂಪತ್ಯ?

03:38 PM Jun 26, 2024 | Team Udayavani |

ಚೆನ್ನೈ: ಕಳೆದ ದಿನಗಳಿಂದ ಬಣ್ಣದ ಲೋಕದಲ್ಲಿ ವಿಚ್ಚೇದನದ ಸುದ್ದಿಗಳು ಹರಿದಾಡುತ್ತಿದೆ. ಸ್ಯಾಂಡಲ್‌ ವುಡ್‌ನಲ್ಲಿ ಯುವರಾಜ್‌ ಕುಮಾರ್‌ – ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ಸುದ್ದಿ ಸದ್ದು ಮಾಡಿತ್ತು. ಇದೀಗ ಕಾಲಿವುಡ್‌ನಲ್ಲಿ(Kollywood) ವಿಚ್ಛೇದನ ವಿಚಾರ ಕೇಳಿ ಬಂದಿದೆ.

Advertisement

ನಟ ಜಯಂ ರವಿ (Actor Jayam Ravi) ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವ ಮಾತುಗಳು ಕಾಲಿವುಡ್‌ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ ಕೆಲ ದಿನಗಳಿಂದ ಈ ಸುದ್ದಿ ಹರಿದಾಡುತ್ತಿದ್ದು ಇತ್ತೀಚೆಗಷ್ಟೇ ಜಯಂ ರವಿ ಅವರ ಪತ್ನಿ ಆರತಿ ಅವರು ಪತಿ ಜಯಂ ಮತ್ತು ಅವರ ಮಕ್ಕಳಾದ ಆರವ್ ಮತ್ತು ಅಯಾನ್ ಅವರ ಫೋಟೋಗಳನ್ನು ಇನ್ಸ್ಟಾಗ್ರಾಮ್‌ ಖಾತೆಯಿಂದ ಡಿಲೀಟ್‌ ಮಾಡಿರುವುದು ವಿಚ್ಛೇದನದ ವಿಚಾರದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: Bollywood: ವರುಣ್‌ ಧವನ್‌ ʼಬೇಬಿ ಜಾನ್‌ʼ ರಿಲೀಸ್‌ ಡೇಟ್ ಔಟ್:‌ ಆಮೀರ್‌ ಚಿತ್ರಕ್ಕೆ ಟಕ್ಕರ್

ಈ ಸುದ್ದಿ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ನಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಿ, ವಿಚ್ಚೇದನ ವಿಚಾರವನ್ನು ತಳ್ಳಿ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ.

Iಈಗಲೂ ಪತಿ – ಪತ್ನಿ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದಾರೆ. ಇದು ಆರತಿ ಅವರ ವೈಯಕ್ತಿಕ ಆಯ್ಕೆ. ಅದನ್ನು ಬೇರೆ ಯಾವುದಕ್ಕೂ ಕಲ್ಪಿಸಿಕೊಳ್ಳವುದು ಸರಿಯಲ್ಲ. ಇಬ್ಬರು ಚೆನ್ನಾಗಿಯೇ ಇದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

Advertisement

2009 ರಲ್ಲಿ ಜಯಂ ಹಾಗೂ ಆರತಿ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next