Advertisement
ಪಾಲಿಕೆ ಸಭಾಂಗಣದಲ್ಲಿ ಶನಿವಾರ ಮೇಯರ್ ದಿವಾಕರ್ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ದಿಮೆದಾರರು, ಸಂಘ-ಸಂಸ್ಥೆಗಳ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ನೈಸರ್ಗಿಕ ತ್ಯಾಜ್ಯ ಸಂಸ್ಕರಣೆ :
ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ, ಹಸಿ ತ್ಯಾಜ್ಯವನ್ನು ನೈಸರ್ಗಿಕವಾಗಿ ಸಂಸ್ಕರಣೆ ಮಾಡುವ ಪ್ರಕ್ರಿಯೆ ಮಠದ ವತಿಯಿಂದ 17 ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿದೆ. ಪಾಲಿಕೆಯವರು ಹಸಿ ತ್ಯಾಜ್ಯವನ್ನು ಅಪಾರ್ಟ್‌ಮೆಂಟ್ ಗಳಿಂದ ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುವುದು ಸಮಸ್ಯೆ ಯಾಗುತ್ತಿರು ವುದರಿಂದ ನೈಸರ್ಗಿಕವಾಗಿ ಅಪಾರ್ಟ್ ಮೆಂಟ್ ಪರಿಸರದಲ್ಲೇ ಸಂಸ್ಕರಿಸಿ ಗೊಬ್ಬರ ಉತ್ಪಾದನೆಗೆ ಪ್ರೋತ್ಸಾಹಿಸಬೇಕು ಎಂದು ಆಯುಕ್ತರಿಗೆ ಮನವಿ ಮಾಡಿದರು.
ಸಭಾಂಗಣಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ :
ಕೆಲವು ಸಭಾಂಗಣಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಅಥವಾ ಸಂಸ್ಕರಿಸಿ ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಕ್ಯಾಟರಿಂಗ್‌ನವರಿಗೂ ಭಾರೀ ಸಮಸ್ಯೆಯಾಗುತ್ತಿದೆ. ಹಾಗಾಗಿ ಎಲ್ಲ ಸಭಾಂಗಣಗಳು ಕೂಡ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಕ್ಯಾಟರಿಂಗ್ ಮಾಲಕರು ಮನವಿ ಮಾಡಿದರು.
ಪ್ಲಾಸ್ಟಿಕ್ ಬಳಸಿದರೆ ಲೈಸನ್ಸ್ ರದ್ದು ನಿಷೇಧಿತ ಪ್ಲಾಸ್ಟಿಕ್‌ಗಳ ಸಂಗ್ರಹ, ಬಳಕೆ ಮಾಡುವುದು ಪತ್ತೆಯಾದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಉದ್ದಿಮೆಗಳ ಪರವಾನಿಗೆ ರದ್ದು ಮಾಡಲಾಗುವುದು ಎಂದು ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು. ಉಪಮೇಯರ್ ವೇದಾವತಿ ಮತ್ತಿತರರು ಉಪಸ್ಥಿತರಿದ್ದರು.
ಝೀರೋ ವೇಸ್ಟ್ :
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ 800ರಿಂದ 900 ಕೆಜಿ ಹಸಿ ಹಾಗೂ 400ರಿಂದ 500 ಕೆಜಿ ಒಣಕಸವನ್ನು ಕಡಿಮೆ ಖರ್ಚಿನಲ್ಲಿ ನೈಸರ್ಗಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಲ್ಲಿ ಉತ್ಪಾದನೆ ಯಾಗುವ ಗೊಬ್ಬರಕ್ಕೂ ಉತ್ತಮ ಬೇಡಿಕೆ ಇದೆ. ಬಲ್ಕ್ ವೇಸ್ಟ್ (ಬೃಹತ್ ತ್ಯಾಜ್ಯ) ವಿಲೇವಾರಿ ಕೂಡ ನೈಸರ್ಗಿಕವಾಗಿ ಮಾಡಲು ಸಾಧ್ಯ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಇದೇ ರೀತಿ ಮಠದ ನೇತೃತ್ವದಲ್ಲಿ ಮಂಗಳೂರು ವಿ.ವಿ. ಕ್ಯಾಂಪಸ್, ಕಟೀಲು ದೇಗುಲಗಳಲ್ಲಿ “ಝೀರೋ ವೇಸ್ಟ್’ (ಶೂನ್ಯ ತ್ಯಾಜ್ಯ) ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಶ್ರೀ ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದರು.