Advertisement

ಮಲೇರಿಯಾ: 48ರಲ್ಲಿ 21 ಪ್ರಕರಣ ಹೊರ ರಾಜ್ಯದ್ದು

11:50 PM Jul 27, 2023 | Team Udayavani |

ಮಂಗಳೂರು: ಒಡಿಶಾ, ಝಾರ್ಖಂಡ್‌, ಬಿಹಾರ ಸಹಿತ ಹೊರ ರಾಜ್ಯಗಳಲ್ಲಿ ಮಲೇರಿಯಾ ಪ್ರಕರಣಗಳು ಏರಿಕೆಯಾ ಗುತ್ತಿದ್ದು, ಅಲ್ಲಿಂದ ರಾಜ್ಯ ಕರಾವಳಿಗೆ ಬರುವ ಕಾರ್ಮಿಕರಲ್ಲೂ ಜ್ವರ ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳ ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

Advertisement

ದಕ್ಷಿಣ ಕನ್ನಡದಲ್ಲಿನ ಶೇ. 50 ರಷ್ಟು ಪ್ರಕರಣಗಳು ಹೊರ ರಾಜ್ಯದ ಕಾರ್ಮಿಕರದ್ದು. ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಹೆಚ್ಚಿನ ಪ್ರಕರಣ ಇಲ್ಲದಿದ್ದರೂ (3 ಪ್ರಕರಣ) ವಿಶೇಷ ನಿಗಾ ಇಡಲಾಗಿದೆ. ದ.ಕ.ದಲ್ಲಿ ಈ ವರ್ಷ ಒಟ್ಟು 48 ಪ್ರಕರಣ ದಾಖಲಾಗಿದ್ದು, 21 ಹೊರ ರಾಜ್ಯದ ಕಾರ್ಮಿಕ ರದ್ದು. 20 ಪ್ರಕರಣಗಳು ಮಂಗಳೂರು ನಗರ ವ್ಯಾಪ್ತಿಯದ್ದು.

ಹೊರ ರಾಜ್ಯದಿಂದ ರೈಲಿನಲ್ಲಿ ಜಿಲ್ಲೆಗೆ ಆಗಮಿಸು ವಾಗಲೇ ಹೆಚ್ಚಿನವರಲ್ಲಿ ಜ್ವರದ ಲಕ್ಷಣ ಇರುತ್ತದೆ. ಸೊಳ್ಳೆಗಳ ಮೂಲಕ ಅದು ಇತರರಿಗೆ ಹರಡುತ್ತದೆ. ವಾರದ ಹಿಂದೆ ಶಕ್ತಿನಗರ ಬಳಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಬಂದ ಒಡಿಶಾದ ಕಾರ್ಮಿಕರಿಗೆ ಮಲೇರಿಯಾ ಕಂಡುಬಂದು ಪರಿಸರದ ಕೆಲವರಿಗೆ ತಗಲಿತ್ತು. ಹಾಗಾಗಿ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಮಲೇರಿಯಾ ಪರೀಕ್ಷೆ ನಡೆಸಿಯೇ ಕೆಲಸ ನೀಡುವಂತೆ ಸಂಬಂಧಪಟ್ಟ ಕನ್‌ಸ್ಟ್ರಕ್ಷನ್‌ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಗೃತಿ ಮೂಡಿಸಲು ಮುಂದಾಗಿವೆ.

ನಿರ್ಮಾಣ ಹಂತದ ಕಟ್ಟಡ ಕೆಲಸ ನಿರತ ಕಾರ್ಮಿಕರ ಬಗ್ಗೆ ನಿಗಾ ಇಡಲು ದ.ಕ., ಉಡುಪಿ ಜಿಲ್ಲೆ ಆರೋಗ್ಯ ಇಲಾಖೆಯು ವಿಶೇಷ ತಂಡವನ್ನು ನಿಯೋಜಿಸಿದೆ. ಕಟ್ಟಡ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ, ಕಾರ್ಮಿಕರ ರಕ್ತದ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ನಿರ್ಗತಿಕರಲ್ಲೂ ಅರಿವು ಮೂಡಿ ಸುತ್ತಿದ್ದು, ಮಾದರಿ ಪರಿಶೀಲನೆಯೂ ನಡೆದಿದೆ.

ಡೆಂಗ್ಯೂ ತಡೆಗೆ ಲಾರ್ವಾ ಸಮೀಕ್ಷೆ
ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ದಿನವಿಡೀ ಬಿಸಿಲು-ಮಳೆಯಿಂದ ಕೂಡಿದ ವಾತಾವರಣ ಇದೆ. ಇದು ಅಲ್ಲಲ್ಲಿ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಲಾರ್ವಾ ಸಮೀಕ್ಷೆ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ಕಿರಿಯ ಆರೋಗ್ಯ ಸಹಾಯಕಿಯರು ಮನೆ ಮನೆಗೆ ಭೇಟಿ ನೀಡಿ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಮೀಕ್ಷೆ ವೇಳೆ ಸೊಳ್ಳೆ ಮರಿ ವಾಸ ಕಂಡುಬಂದರೆ ಹಿರಿಯ ಆರೋಗ್ಯ ಸಹಾಯಕರ ಗಮನಕ್ಕೆ ತರಲಾಗುತ್ತಿದೆ.

Advertisement

ಮಲೇರಿಯಾ ತಡೆಗಟ್ಟಿ
 ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಿರಲಿ  ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವತ್ಛಗೊಳಿಸಿ  ಗರ್ಭಿಣಿಯರಂತೂ ಸೊಳ್ಳೆಯಿಂದ ದೂರವಿರಿ.
 ಮಂದ ಬಣ್ಣದ ಉಡುಪು ಧರಿಸಿದರೆ ಸೊಳ್ಳೆ ನಿಮ್ಮಿಂದ ದೂರವಿರುತ್ತದೆ. ನಿತ್ಯವೂ ಮನೆಯನ್ನು ಒರೆಸಿ ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ
ಹತ್ತಿರದ ವೈದ್ಯರನ್ನು ಕಾಣಿ.

ಕೆಲವು ರಾಜ್ಯಗಳಲ್ಲಿ ಮಲೇರಿಯಾ ಪ್ರಕರಣ ಹೆಚ್ಚಿವೆ. ಅಲ್ಲಿಂದ ವಿವಿಧ ಕೆಲಸಗಳಿಗೆ ಆಗಮಿಸುವವರಲ್ಲಿ ಮಲೇರಿಯಾ ಕಾಣಿಸಿ ಕೊಳ್ಳುತ್ತಿದೆ. ಆರೋಗ್ಯ ಇಲಾಖೆ ವಿಶೇಷ ನಿಗಾ ಇಟ್ಟಿದ್ದು, ಸ್ಥಳೀಯ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಪರೀಕ್ಷೆ ಉಚಿತ.
– ನವೀನ್‌ ಚಂದ್ರ ಕುಲಾಲ್‌, ಡಾ| ಪ್ರಶಾಂತ್‌ ಭಟ್‌, ಜಿಲ್ಲಾ ಆಶ್ರಿತ ರೋಗ ವಾಹಕ ನಿಯಂತ್ರಣ ಅಧಿಕಾರಿಗಳು, ದ.ಕ. ಮತ್ತು ಉಡುಪಿ

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next