Advertisement

15ರಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಸಭೆ 

05:42 PM Jul 12, 2018 | |

ನರಗುಂದ: ಮಹದಾಯಿ ಹೋರಾಟ ಮೂರನೇ ವರ್ಷ ಗತಿಸುತ್ತ ಬಂದರೂ ಇದುವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸ್ಪಂದನೆಯಿಲ್ಲದೇ ರೈತರ ಕೂಗು ಅರಣ್ಯರೋಧನವಾಗಿದೆ. ಈ ಹಂತದಲ್ಲಿ ಮುಂದಿನ ಹೋರಾಟದ ರೂಪುರೇಷೆ ಮತ್ತು ಜು. 16ರಂದು ಮೂರು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಜು.15ರಂದು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಪ್ರಮುಖರ ಸಭೆ ಕರೆಯಲಾಗಿದೆ ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ರೈತರಿಗೆ ಕರೆ ನೀಡಿದರು.

Advertisement

ಬುಧವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಸುದೀರ್ಘ‌ 1092ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಅವರು ಮಾತನಾಡಿ, ಜು.15ರಂದು ಬೆಳಗ್ಗೆ 11:00ಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಎ.ಪಿ. ಪಾಟೀಲ ಅವರ ಗೋದಾಮಿನಲ್ಲಿ ಮಹದಾಯಿ ಹೋರಾಟ ರೂವಾರಿ ವೀರೇಶ ಸೊಬರದಮಠ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ನಾಲ್ಕೂ ಜಿಲ್ಲೆಗಳ ಎಲ್ಲ ರೈತ ಮುಖಂಡರು, ರೈತ ಸೇನಾ ಪದಾಧಿ ಕಾರಿಗಳು, ರೈತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಆಳುವ ಸರ್ಕಾರಗಳಲ್ಲಿ ರೈತರ ಮಹತ್ವಾಕಾಂಕ್ಷಿ ಯೋಜನೆ ಮತ್ತು ಇಲ್ಲಿ ನಾವು ನಿತ್ಯ ಪರಿತಪಿಸುತ್ತಿರುವ ಸಂಗತಿ ಗಂಭೀರವಾಗಿ ಕಾಣಿಸುತ್ತಿಲ್ಲ.ನ್ಯಾಯಾ ಧೀಕರಣದಿಂದಲೇ ನಮಗೆ ನ್ಯಾಯ ಸಿಗುವುದು ನಿಚ್ಚಳವಾಗಿದೆ ಎಂದು ಹೇಳಿದರು. ಮಹತ್ವದ ಯೋಜನೆ: ಸತತ ಬರಗಾಲದಿಂದ ಈ ಭಾಗದಲ್ಲಿ ರೈತರು ಪ್ರತಿವರ್ಷ ಒಂದು ಬೆಳೆ ತೆಗೆಯಲೂ ಪರದಾಡುವಂತಾಗಿದೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಆ ಭವಣೆ ನೀಗಲಿದೆ. ಮಲಪ್ರಭೆ ಒಡಲು ತುಂಬಿದರೆ ಅಚ್ಚುಕಟ್ಟು ಪ್ರದೇಶದಲ್ಲಿ ಹಸಿರು ಕ್ರಾಂತಿ ಸೃಷ್ಟಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಮನ್ವಯ ಸಮತಿ ಕೋಶಾಧ್ಯಕ್ಷ ಫಕೀರಪ್ಪ ಜೋಗಣ್ಣವರ ಮಾತನಾಡಿ, ಜು.15ರಂದು ಏರ್ಪಡಿಸಲಾಗಿರುವ ಸಭೆಗೆ ಈ ಭಾಗದ ರೈತ ನಾಯಕರು ಪಾಲ್ಗೊಂಡು ಸಲಹೆ,ಸೂಚನೆ ನೀಡಬೇಕು. ಈಗ ಒಮ್ಮೆ ಈ ಹೋರಾಟಕ್ಕೆ ಹಿನ್ನೆಡೆಯಾದರೆ ಮತ್ತೆ ನಾಲ್ಕು ದಶಕಗಳ ಕಾಲ ಯೋಜನೆ ನನೆಗುದಿಗೆ ಬೀಳುತ್ತದೆ. ಸಮಸ್ತ ರೈತ ಬಾಂಧವರು ಹೋರಾಟ ಬಲಪಡಿಸಬೇಕು ಎಂದು ಕರೆ ನೀಡಿದರು.

ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ, ನಾಗರತ್ನ ಸವಳಭಾವಿ, ಅನಸಮ್ಮ ಶಿಂಧೆ, ಬಸಮ್ಮ ಐನಾಪುರ, ಚನ್ನವ್ವ ಕರ್ಜಗಿ, ದೇವಕ್ಕ ತಾಳಿ, ಜನ್ನತಬಿ ಮುಲ್ಲಾನವರ, ಮಾಬೂಬಿ ಕೆರೂರ, ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಶ್ರೀಶೈಲ ಮೇಟಿ, ವೆಂಕಟೇಶ ಸಾಬಳೆ, ಹನಮಂತ ಕೋರಿ, ವಿರುಪಾಕ್ಷಪ್ಪ ಪಾರಣ್ಣವರ, ವಾಸು ಚವ್ಹಾಣ, ಯಲ್ಲಪ್ಪ ಗುಡದರಿ, ಈರಣ್ಣ ಗಡಗಿ, ಅರ್ಜುನ ಮಾನೆ, ಎಚ್‌.ಸಿ. ಹಿರೇಹೊಳಿ, ಜಯಪಾಲ ಮುತ್ತಿನ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next