Advertisement

ಮಳಲಿ ಮಸೀದಿ ವಿವಾದ: ಪ್ರಚೋದನಕಾರಿ ಹೇಳಿಕೆ ನಿರ್ಲಕ್ಷಿಸಿ; ಮಾತುಕತೆಯಿಂದಲೇ ಸಮಸ್ಯೆ ಪರಿಹಾರ

01:32 AM May 30, 2022 | Team Udayavani |

ಪಣಂಬೂರು: ಮಳಲಿ ಮಸೀದಿಯ ವಿಚಾರದಲ್ಲಿ ಗ್ರಾಮಸ್ಥರು ಐಕ್ಯಮತದಿಂದ ಇದ್ದಾರೆ. ಯಾವುದೇ ಗೊಂದಲವಿಲ್ಲ. ಹೊರಗಿನ ಎಸ್‌ಡಿಪಿಐ, ಕಾಂಗ್ರೆಸ್‌ ಮುಖಂಡರ ವಾತಾವರಣ ಕೆಡಿಸುವ ಹೇಳಿಕೆಗಳನ್ನು ನಿರ್ಲಕ್ಷಿಸಿ. ಶಾಂತಿಯನ್ನು ಎಲ್ಲರೂ ಕಾಪಾಡಿಕೊಂಡು ಬರಬೇಕು ಎಂದು ಶಾಸಕ ಡಾ| ಭರತ್‌ ಶೆಟ್ಟಿ ಹೇಳಿದರು.

Advertisement

ಅವರು ರವಿವಾರ ಮಳಲಿ ಮಸೀದಿ ಆಡಳಿತ ಸಮಿತಿ ಮುಖ್ಯಸ್ಥರು, ವಿಎಚ್‌ಪಿ, ಬಜರಂಗದಳ, ಹಿಂದೂ ಸಂಘಟನೆಗಳ ಮುಖಂಡರ ಸಭೆ ನಡೆಸಿ ಮಾತನಾಡಿದರು.

ಕಾಂಗ್ರೆಸ್‌ ನಾಯಕರಾದ ಡಿ.ಕೆ.ಶಿ., ಸಿದ್ದರಾಮಯ್ಯ ವಿಚಾರ ತಿಳಿಯದೆ ಹೇಳಿಕೆ ನೀಡಿದ್ದಾರೆ. ಎಸ್‌ಡಿಪಿಐ ಸಮಾವೇಶದ ಹೆಸರಿನಲ್ಲಿ ಮುಸ್ಲಿಂ ಸಮುದಾಯ ವನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಇದನ್ನು ಮುಸಲ್ಮಾನ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಸಹಕಾರವಿದ್ದರೆ ಮಾತುಕತೆಯ ಮೂಲಕ ಶಾಂತಿಯಿಂದ ಈ ವಿಚಾರ ಇತ್ಯರ್ಥದ ವಿಶ್ವಾಸವಿದೆ ಎಂದರು.

400 ವರ್ಷಗಳಿಂದ ನಮಗೆ ಇದರ ಇತಿಹಾಸ ತಿಳಿದಿದ್ದು, ನಾವು ನಮ್ಮ ಧಾರ್ಮಿಕ ಆಚರಣೆ ಮಾಡಿ ಕೊಂಡು ಬರುತ್ತಿದ್ದೇವೆ. ಪಾರಂಪ ರಿಕ ವಾಗಿ ಬಂದ ಬಗ್ಗೆಯೂ ಹಿರಿ ಯರ ಮಾತಿನಂತೆ ದಾಖಲೆ ಇರಿಸಿ ಕೊಂಡಿದ್ದೇವೆ ಎಂದು ಮಸೀದಿ ಆಡಳಿತ ಸಮಿತಿಯ ಪ್ರಮುಖರು ಮಾಹಿತಿ ನೀಡಿದರು.

ನಾವು ನಮ್ಮ ಧಾರ್ಮಿಕ ನಂಬಿಕೆ ಯಂತೆ ತಾಂಬೂಲ ಪ್ರಶ್ನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಇತರರ ಪ್ರಚೋದನೆಗೆ ಒಳಗಾಗಿ ಸಂಘರ್ಷಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. ಮಳಲಿಯ ಹಿಂದೂ, ಮುಸ್ಲಿಂ ಸಮುದಾಯ, ಆಡಳಿತ ಸಮಿತಿ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ ಎಂದು ವಿಎಚ್‌ಪಿ ಬಜರಂಗದಳ ವಿಭಾಗೀಯ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

Advertisement

ಹಿಂದೂ ಸಂಘಟನೆಯ ಶಿವಾನಂದ ಮೆಂಡನ್‌, ಭುಜಂಗ ಕುಲಾಲ್‌, ಸೋಹನ್‌ ಅತಿಕಾರಿ, ಚಂದ್ರಹಾಸ್‌ ನಾರ್ಲ, ಸೀತಾರಾಮ್‌ ಪೂಜಾರಿ, ವಜ್ರಾಕ್ಷ, ನಾರಾಯಣ ಅಂಚನ್‌, ಮಸೀದಿ ಆಡಳಿತ ಸಮಿ ತಿಯ ಅಧ್ಯಕ್ಷ ಮಾಮು ಮನೇಲ್‌, ಕಾರ್ಯದರ್ಶಿ ಸರ್ಫರಾಜ್ , ಮುಸ್ತಾಫಾ, ರಝಾಕ್‌,ಇಕ್ಬಾಲ್‌, ಮಯ್ಯದ್ದಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next