Advertisement

ಮಾಲಾಡಿ: ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

02:43 PM Feb 01, 2018 | Team Udayavani |

ಮಡಂತ್ಯಾರು: ಪ.ಜಾ. ಪಂಗಡ ಕಾಲನಿಯಲ್ಲಿ 600 ಕಿ. ಮೀ. ರಸ್ತೆ ಕಾಂಕ್ರೀಟುಗೊಂಡಿದೆ. ಕಾಲನಿಗಳ ಅಭಿವೃದ್ಧಿ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣ ಮಾಡುತ್ತೇವೆ. ಮಾಲಾಡಿ ರಸ್ತೆಗೆ 50 ಲ. ರೂ. ಮಂಜೂರು ಮಾಡುತ್ತೇನೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ಗ್ರಾಮಾಭಿವೃದ್ಧಿ ಮತ್ತು ಪಂ. ಇಲಾಖೆ ಬೆಳ್ತಂಗಡಿ, ಜಿ.ಪಂ. ಎಂಜಿನಿಯರಿಂಗ್‌ ಉಪವಿಭಾಗ ಬೆಳ್ತಂಗಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಮತ್ತು ಗ್ರಾ.ಪಂ. ಮಾಲಾಡಿ ಇದರ ಸಹಯೋಗದೊಂದಿಗೆ ಮಾಲಾಡಿ ಗ್ರಾ.ಪಂ. ವಠಾರದಲ್ಲಿ ಮಂಗಳವಾರ ನಡೆದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ, ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಸವರಾಜು ಕೆ. ಅಯ್ಯಣ್ಣವರ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸಿ.ಆರ್‌. ನರೇಂದ್ರ, ಮಾಲಾಡಿ ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮಾ, ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಪ್ರಿಯಾ ಆ್ಯಗ್ನೇಸ್‌ ಚಾಕೋ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಪದ್ಮನಾಭ ಸಾಲ್ಯಾನ್‌ ಸ್ವಾಗತಿಸಿದರು. ಸುಕೇಶ್‌ ಕಾರ್ಯಕ್ರಮ ನಿರೂಪಿಸಿದರು.

500 ಕೋಟಿ ರೂ. ಬೇಡಿಕೆ
ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಅವರಲ್ಲಿ 500 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟಿದ್ದೇನೆ. 100 ಕೋಟಿ ರೂ. ಭರವಸೆ ನೀಡಿದ್ದು, 50 ಕೋಟಿ ರೂ. ಬಿಡುಗಡೆಯಾಗಿದೆ. ಗೋಮಾಳ ಭೂಮಿಯನ್ನೂ ಮುಂದಿನ ದಿನಗಳಲ್ಲಿ ಬಡ ರೈತರಿಗೆ ಹಂಚುವುದಾಗಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next