Advertisement
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಭಾಗ ಸಮಿತಿಯ ಅಧ್ಯಕ್ಷೆ, ಸ್ಥಳೀಯ ನಗರ ಸೇವಕಿ ಜ್ಯೋತ್ಸಾ° ವೆಹ್ತಾ ಅವರು ದೀಪಾವಳಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ದೀಪಾವಳಿ ವಿಶೇಷಾಂಕವು ಸಂಸ್ಕೃತಿಯನ್ನು ಅನುಸರಿಸುವ ಕಾರ್ಯವನ್ನು ಮಾಡುತ್ತಿದೆ. ಸಾಹಿತ್ಯವು ಸಮಾಜದ ದರ್ಪಣವಾಗಿದ್ದು, ಸಂಸ್ಕೃತಿಯೊಂದಿಗೆ ಸಾಹಿತ್ಯದ ಸಮಾಗಮ ಈ ವಿಶೇಷಾಂಕದಲ್ಲಿ ಮೂಡಿ ಬಂದಿರುವುದು ಅಭಿನಂದನೀಯವಾಗಿದೆ. ಮರಾಠಿಗರ ವೈಶಿಷ್ಟéವೇ ಸಾಹಿತ್ಯ, ಕಲೆ, ರಾಜಕಾರಣವಾಗಿದೆ. ಮಲಬಾರ್‌ಹಿಲ್ ಕಲಾಕ್ರೀಡಾ ಕೇಂದ್ರವು ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ಈ ವಿಶೇಷಾಂಕದಲ್ಲಿ ಓದುಗರ ಜ್ಞಾನವೃದ್ಧಿಸುವ ಮಾಹಿತಿಗಳಿರುವುದು ಸಂತೋಷದ ಸಂಗತಿಯಾಗಿದೆ. ಕಳೆದ 36 ವರ್ಷಗಳಿಂದ ವಾಲ್ಕೇಶ್ವರ, ಮಲಬಾರ್ ಹಿಲ್,ಬಾಣಗಂಗಾ ವಿಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಈ ಸಂಸ್ಥೆ ಸಲ್ಲಿಸುತ್ತಿರುವ ಕಾರ್ಯ ಅನುಕರಣೀಯವಾಗಿದೆ. ಮಲ್‌ಬಾರ್ ಹಿಲ್ ಕಲಾ ಕ್ರೀಡಾಕೇಂದ್ರದ ಗ್ರಂಥಾಲಯ ವಿಭಾಗವು ಪ್ರತೀ ವರ್ಷವೂ ವಿಶೇಷತೆಯುಳ್ಳ ವಿಶೇಷಾಂಕವನ್ನು ಪ್ರಕಟಿಸುತ್ತಿರುವುದು ಅಭಿನಂದನೀಯವಾಗಿದೆ ಎಂದು ನುಡಿದು ಸಂಸ್ಥೆಗೆ ಶುಭ ಹಾರೈಸಿದರು.