ಬೆಂಗಳೂರು: ಭಿನ್ನಶೈಲಿಯ ವಜ್ರಾಭರಣ ಗಳ ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿ ಆಗಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಮಾರಾಟ ಮತ್ತು ಪ್ರದರ್ಶನ ಮೇಳ ಶನಿವಾರದಿಂದ ಆರಂಭವಾಗಿದೆ.
ಅಪರೂಪದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಅ.17ರ ವರೆಗೂ ನಡೆಯಲಿದೆ. ಜಯನಗರ ಮತ್ತು ರಾಜಾಜಿನಗರದ ಶೋ ರೂಮ್‌ನಲ್ಲಿ ಮೇಳ ಆರಂಭವಾಗಿದ್ದು ಗ್ರಾಹಕರ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಚಿತ್ರನಟಿ ಅದಿತಿ ಪ್ರಭುದೇವ ಅವರು ಶನಿವಾರ ಚಾಲನೆ ನೀಡಿದರು. ಇಲ್ಲಿ ದೊರೆಯುವ ಆಭರಣಗಳು ಕಲಾಕೌಶಲ್ಯಕ್ಕೆ ಮಾದರಿಯಾಗಿವೆ.
ಇದನ್ನೂ ಓದಿ:- ಐಸಿಸ್, ಟಿಆರ್ ಎಫ್ ನಂಟು: ಏಕಕಾಲದಲ್ಲಿ 16 ಕಡೆ ದಾಳಿ ನಡೆಸಿದ ಎನ್ ಐಎ
ಅಲ್ಲದೆ ಪ್ರತಿ ಆಭರಣವು ವಿಶೇಷ ಪರಿಣಿತರಿಂದ ವಿನ್ಯಾಸಗೊಲಿಸಲಾಗಿದೆ. ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಪ ಉತ್ಪನ್ನಗಳಾದ ಎಂಐಎನ್‌ಇ ಡೈಮಂಡ್ಸ್ ಜ್ಯೂವೆಲ್ಲರಿ, ಇಆರ್‌ಎ, ಡಿವೈನ್ ಇಂಡಿಯಾ ಹೆರಿಟೇಜ್ ಜ್ಯೂವೆಲ್ಲರಿ ಹಾಗೂ ಮಕ್ಕಳ ಆಭರಣಗಳು ಸೇರಿದಂತೆ ಮತ್ತಿತರ ಭಿನ್ನ ಶೈಲಿಯ ಆಭರಣಗಳು ಗ್ರಾಹಕರಿಗೆ ದೊರೆಯಲಿವೆ.
“ಎಕ್ಸ್ ಪೀರಿಯೆನ್ಸ್ ವೇರೇಬಲ್ ಆರ್ಟ್’ ಥೀಮ್ ಹೊಂದಿರುವ ಶೋ ಇದಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ 50ಸಾವಿರ ರೂ.ಗೂ ಹೆಚ್ಚಿನ ಮೊತ್ತದ ವಜ್ರಾಭರಣಗಳನ್ನು ಕೊಳ್ಳುವ ಗ್ರಾಹಕರು ಚಿನ್ನದ ನಾಣ್ಯವನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.