Advertisement

ಮಲಬಾರ್‌ ಗೋಲ್ಡ್‌, ಡೈಮಂಡ್‌ನ‌ಲ್ಲಿ ಅಲೀಯಂ ವಜ್ರಾಭರಣದ ಸಂಗ್ರಹ

11:41 PM Jun 14, 2019 | Lakshmi GovindaRaj |

ಬೆಂಗಳೂರು: ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಈಗ ಅಲೀಯಂ ವಜ್ರಾಭರಣಗಳ ಕಲೆಕ್ಷನ್‌ ಪರಿಚಯಿಸಿದೆ. ಅಲೀಯಂ ಹೂಗಳ ಸೊಬಗಿನಿಂದ ಪ್ರೇರಣೆ ಪಡೆದು ವಿನೂತನ ವಿನ್ಯಾಸದ ವಜ್ರಾಭರಣಗಳನ್ನು ಸಂಗ್ರಹಿಸಲಾಗಿದ್ದು, ಇದರ ದರ 50 ಸಾವಿರ ರೂ.ಗಳಿಂದ ಆರಂಭವಾಗಲಿದೆ.

Advertisement

ನಕ್ಲೆಸ್‌, ಪೆಂಡಾಲ್‌ ಸೆಟ್‌, ಕಿವಿಯೋಲೆ, ಬಳೆ ಇತ್ಯಾದಿಗಳು ಅತಿ ಸುಂದರವಾದ ವಿನ್ಯಾಸದಿಂದ ಕೂಡಿದೆ. ಅತಿ ಹಗುರವಾದ ವಜ್ರಾಭರಣ, ಸಮಾರಂಭ ಹಾಗೂ ವಿಶೇಷ ಆಚರಣೆಯ ಸಂದರ್ಭದಲ್ಲಿ ಮತ್ತು ಮದುವೆಗೆ ಅವಶ್ಯವಿರುವ ಹೊಸ ವಿನ್ಯಾಸದ ವಜ್ರಾಭರಣ ಇಲ್ಲಿವೆ.

ಹೊಸ ಟ್ರೆಂಡ್‌ಗೆ ತಕ್ಕಂತೆ, ಅತಿಸೂಕ್ಷ್ಮವಾಗಿ ಕೆತ್ತಲಾಗಿರುವ ಅಲೀಯಂ ಸಂಗ್ರಹಗಳು ವಜ್ರಾಭರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಮಹಿಳೆಯರು ಮತ್ತು ವಜ್ರಾಭರಣವನ್ನು ಇಷ್ಟಪಡುವ ಗೃಹಿಣಿಯರನ್ನು ಗಮನದಲ್ಲಿಟ್ಟುಕೊಂಡು ಅಲೀಯಂ ಸಂಗ್ರಹ ಮಾಡಲಾಗಿದೆ. ಸೂಕ್ಷ್ಮಾತಿಸೂಕ್ಷ್ಮ ವಿನ್ಯಾಸ ಇರುವುದರಿಂದ ಎಲ್ಲರೂ ಇಷ್ಟಪಡುವಂತಿದೆ ಎಂದು ಮಲಬಾರ್‌ ಸಮೂಹದ ಮುಖ್ಯಸ್ಥ ಎಂ.ಪಿ.ಅಹಮ್ಮದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಐಜಿಐ ಹಾಗೂ ಜಿಐಎ ಪ್ರಮಾಣಿಕರಿಸಿರುವ ವಜ್ರಾಭರಣಗಳನ್ನು ಬಿಐಎಸ್‌ ಹಾಲ್ಮರ್ಕ್‌ 916 ಚಿನ್ನಾಭರಣವನ್ನು ಮಾತ್ರ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನಿಂದ ಮಾರಾಟ ಮಾಡಲಾಗುತ್ತಿದೆ. ಎಲ್ಲ ಉತ್ಪನ್ನಗಳಿಗೆ ವಿವರವಾದ ಹಾಗೂ ಪಾರದರ್ಶಕವಾದ ದರಪಟ್ಟಿ ಇರುತ್ತದೆ.

ಜೀವನ ಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮಾ ಸೌಲಭ್ಯ ಜತೆಗೆ ಬೈಬ್ಯಾಕ್‌ ಗ್ಯಾರಂಟಿಯನ್ನು ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ನೀಡುತ್ತಿದೆ. 1993ರಲ್ಲಿ ಕೇರಳದಲ್ಲಿ ಆರಂಭವಾದ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆ ಈಗ ಮಲಬಾರ್‌ ಸಮೂಹದ ಹೆಸರಿನಲ್ಲಿ 10 ದೇಶಗಳಲ್ಲಿ 250 ಮಳಿಗೆಗಳನ್ನು ಹೊಂದಿದ್ದು, ಭಾರತದಲ್ಲಿ ಮುಂಚೂಣಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next