Advertisement

ರೀಲ್ಸ್ ಮಾಡಲು ಹೋಗಿ ದುರಂತ: ರೈಲು ಢಿಕ್ಕಿ ಹೊಡೆದು ಮಹಿಳೆ ಸೇರಿ ಮೂವರು ಸ್ಥಳದಲ್ಲೇ ಸಾವು

05:10 PM Dec 15, 2022 | Team Udayavani |

ಗಾಜಿಯಾಬಾದ್ : ರೈಲು ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ ಓರ್ವ ಮಹಿಳೆ ಸೇರಿ ಮೂರು ಮಂದಿಗೆ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಗಾಜಿಯಾಬಾದ್‌ನ ಮಸೂರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಜಿಯಾಬಾದ್ ಡಿಸಿಪಿ ಇರಾಜ್ ರಾಜಾ ಮಾತನಾಡಿ, ರಾತ್ರಿ 9 ಗಂಟೆಗೆ ಕಲ್ಲು ಗರ್ಹಿ ರೈಲ್ವೆ ಹಳಿಯ ಮೇಲೆ ಮೂರು ಮಂದಿ ರೀಲ್ಸ್ ಮಾಡುವ ವೇಳೆ ಹೈಸ್ಪೀಡ್ ಪದ್ಮಾವತ್ ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಆಶೀರ್ವದಿಸಿ, ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ: ಕೊಪ್ಪಳದಲ್ಲಿ ಜೆ.ಪಿ.ನಡ್ಡಾ

Advertisement

Udayavani is now on Telegram. Click here to join our channel and stay updated with the latest news.

Next