Advertisement

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ|ರಾಷ್ಟ್ರೀಯ ಮಹಿಳಾ ಆಯೋಗ

06:21 PM Sep 20, 2021 | Team Udayavani |

ನವದೆಹಲಿ : ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ವಿರೋಧಿಸಿದೆ. “Me Too” ಪ್ರಕರಣದ ಆರೋಪಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿರುವುದು ಮಹಿಳೆಯರ ಸುರಕ್ಷತೆ ಅಪಾಯ ತಂದೊಡ್ಡಿದೆ ಎಂದು ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ.

Advertisement

ಸೋಮವಾರ ಮಾಧ್ಯಮಗಳಿಗೆ ಮಾತನಾಡಿರುವ ಶರ್ಮಾ 2018 ರಲ್ಲಿ ಚರಣ್‍ಜಿತ್ ಸಿಂಗ್ ವಿರುದ್ಧ ಕೇಳಿ ಬಂದಿದ್ದ ಮಹಿಳಾ ದೌರ್ಜನ್ಯ ಆರೋಪವನ್ನು ಉಲ್ಲೇಖಿಸಿದ್ದಾರೆ. Me Too ಅಭಿಯಾನದ ವೇಳೆ ಅವರ ಆರೋಪ ಕೇಳಿ ಬಂದಿತ್ತು. ಇಂತಹ ವ್ಯಕ್ತಿ ಸಿಎಂ ಸ್ಥಾನಕ್ಕೆ ಅರ್ಹನಲ್ಲ ಎಂದು ಶರ್ಮಾ ಹೇಳಿದ್ದಾರೆ.

2018ರಲ್ಲಿ ನಡೆದ Me Too ಅಭಿಯಾನದಲ್ಲಿ ಚರಣ್‍ಜಿತ್ ಸಿಂಗ್ ಹೆಸರು ಕೇಳಿ ಬಂದಿತ್ತು. ಈತನ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿತ್ತು. ಅವರ ವಿರುದ್ಧ ಧರಣಿ ಕೂಡ ನಡೆದಿದ್ದವು. ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ದ್ರೋಹದ ಕೆಲಸ. ಸದ್ಯ ಮಹಿಳೆಯೋರ್ವಳು ( ಸೋನಿಯಾ ಗಾಂಧಿ) ಮುಖ್ಯಸ್ಥರಾಗಿರುವ ಪಕ್ಷದಿಂದ ಆತನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಇದು ಮಹಿಳೆಯ ಸುರಕ್ಷತೆಗೆ ಅಪಾಯ. ಅವರ ವಿರುದ್ಧ ತನಿಖೆ ನಡೆಯಲೇಬೇಕು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ. ಕೂಡಲೇ ಸೋನಿಯಾ ಗಾಂಧಿ ಅವರು ಚರಣ್‍ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕೆಂದು ಶರ್ಮಾ ಆಗ್ರಹಿಸಿದ್ದಾರೆ.

ಇನ್ನು 2018ರ ರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೋರ್ವಳಿಗೆ ಅನುಚಿತ ಮೆಸೇಜ್ ಕಳುಹಿಸಿದ್ದ ಆರೋಪ ಚರಣ್‍ಜಿತ್ ಸಿಂಗ್ ವಿರುದ್ಧ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next