Advertisement
– ಮೇಕಪ್ ಎಷ್ಟೇ ಗಾಢವಾಗಿದ್ದರೂ, ನೇರವಾಗಿ ಚರ್ಮವನ್ನು ಉಜ್ಜಬೇಡಿ. ಮೊದಲು ಕೊಬ್ಬರಿ ಎಣ್ಣೆ ಅಥವಾ ಮೇಕಪ್ ರಿಮೂವರ್ ಬಳಸಿ.– ಮೇಕಪ್ ರಿಮೂವ್ ಮಾಡಿದ ನಂತರ ಎರಡೆರಡು ಬಾರಿ ಮುಖ ತೊಳೆಯಬೇಕು. ಮೊದಲು ಮಾಯಿಶ್ಚರೈಸರ್ ಅಂಶವಿರುವ ಕ್ಲೆನ್ಸರ್‌ನಿಂದ ತೊಳೆದು, ಆಮೇಲೆ ಸೋಪ್/ಫೇಸ್‌ವಾಶ್ ಉಪಯೋಗಿಸಿ.
-ದಿನವೂ ಗಾಢವಾಗಿ ಮೇಕ್‌ಅಪ್ ಮಾಡುವವರಾದರೆ, ರಾಸಾಯನಿಕಗಳಿಂದ ಚರ್ಮ ಬೇಗ ಕಳೆಗುಂದುವ ಅಪಾಯ ಇರುತ್ತದೆ. ಹಾಗಾಗಿ ನಿತ್ಯವೂ ಒಳ್ಳೆಯ ಮಾಯಿಶ್ಚರೈಸರ್‌ನಿಂದ ತ್ವಚೆಗೆ ಆರೈಕೆ ಮಾಡಿ.
-ಮೇಕ್‌ಅಪ್ ತೆಗೆದ ನಂತರ ಕೊಬ್ಬರಿ ಎಣ್ಣೆ ಸವರಿದರೆ ಉತ್ತಮ.
-ಮೇಕ್‌ಅಪ್ ನಂತರ ಮುಖವನ್ನಷ್ಟೇ ಅಲ್ಲ, ಮೇಕ್‌ಅಪ್‌ಗೆ ಬಳಸುವ ಬ್ರಷ್ ಅನ್ನು ಕೂಡಾ ತೊಳೆದು ಸ್ವತ್ಛವಾಗಿಡಬೇಕು. ಆ ಬ್ರಷ್‌ಗಳನ್ನು ದೀರ್ಘಕಾಲ ತೊಳೆಯದೇ ಇದ್ದರೆ ಚರ್ಮದ ಅಲರ್ಜಿ ಉಂಟಾಗಬಹುದು.
-ಅವಧಿ ಮೀರಿದ (ಎಕ್ಸ್‌ಪೈರ್ ಆದ) ಸೌಂದರ್ಯವರ್ಧಕಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.
-ಮೇಕ್‌ಅಪ್ ಮಾಡಿಕೊಂಡಾಗ ಮುಖದ ಮೇಲೆ ಗುಳ್ಳೆ, ಕಜ್ಜಿ, ಉರಿ ಕಂಡುಬಂದರೆ ಆ ಉತ್ಪನ್ನದ ಬಳಕೆ ನಿಲ್ಲಿಸಿ.
-ನಿಮ್ಮ ಮೇಕ್‌ಅಪ್ ವಸ್ತುಗಳನ್ನು ಬೇರೆಯವರೊಂದಿಗೆ ಶೇರ್ ಮಾಡಬೇಡಿ. ಇಲ್ಲದಿದ್ದರೆ, ಚರ್ಮ ಸಂಬಂಧಿ ರೋಗಗಳು ಹರಡಬಹುದು.