ಸೊರಬ: ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನುಜಾರಿಗೆ ತರುತ್ತಿದ್ದು, ಜನತೆ ಇದರಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ತಾಲೂಕಿನ ತೆಲಗುಂದ್ಲಿ ಗ್ರಾಮದಲ್ಲಿ ಶುಕ್ರವಾರ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ, ಲೋಕೋಪಯೋಗಿಬಂದರು ಮತ್ತು ಒಳನಾಡು ಜಲಸಾರಿಗೆಇಲಾಖೆ ವತಿಯಿಂದ 37.50 ಲಕ್ಷ ರೂ.ವೆಚ್ಚದ ಗ್ರಾಮಕ್ಕೆ ಕ್ರಿಯಾತ್ಮಕ ನಲ್ಲಿ ಸಂಪರ್ಕಕಾಮಗಾರಿ ಗುದ್ದಲಿ ಪೂಜೆ, 1 ಕೋಟಿರೂ., ವೆಚ್ಚದ ಗ್ರಾಮದ ಊರೊಳಗಿನರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕಾಮಗಾರಿಯ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಜನತೆಗೆ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಅಭಿವೃದ್ಧಿ ಹೊಂದಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಕಾಪಾಡಿಕೊಳ್ಳುವ ಹೊಣೆ ಜನತೆಯದ್ದೇ ಆಗಿದೆ. ರಸ್ತೆಗಳಲ್ಲಿ ಪೈಪ್ ಲೈನ್ ಮತ್ತಿತರ ಕಾರಣಗಳಿಗೆ ಅಗೆಯದಂತೆ ನೋಡಿಕೊಳ್ಳುವುದು ಹಾಗೂ ಅಂತಹ ಪ್ರಕರಣಗಳು ಕಂಡು ಬಂದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನವನ್ನು ಯಾತ್ರಾ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಆವರಣದಲ್ಲಿ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ 7 ಕೋಟಿ ರೂ., ವೆಚ್ಚದಲ್ಲಿ ಕಾಮಗಾರಿಗಳುನಡೆಯಲಿದ್ದು, ಕೇಂದ್ರ ಸರ್ಕಾರದ ಒಪ್ಪಿಗೆ ನೀಡಬೇಕಿದೆ. ಇನ್ನು ದೇವಸ್ಥಾನದ ಸಮೀಪದ ಹನುಮಂತ ದೇವಸ್ಥಾನದ ಸಮೀಪದಲ್ಲಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಚಂದ್ರಗುತ್ತಿಯನ್ನುಸಮಗ್ರವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಚಂದ್ರಗುತ್ತಿ, ಬಾಡದಬೈಲು,ಹೊಳೆಮರೂರು, ದ್ಯಾವಾಸ ಗ್ರಾಮಗಳಲ್ಲಿ ಸಮುದಾಯ ಭವನ, ತೆಲಗುಂದ್ಲಿ, ಅಂಬಲಿಕೊಪ್ಪ, ಅಂದವಳ್ಳಿ ಕ್ರಾಸ್, ಕಕ್ಕರಸಿ ಗ್ರಾಮಗಳಲ್ಲಿ ಅಭಿವೃದ್ಧಿಗೊಂಡ ರಸ್ತೆಗಳು ಮತ್ತು ತೆಲಗುಂದ್ಲಿ, ಮುಟುಗುಪ್ಪೆಗ್ರಾಮಗಳಲ್ಲಿ ಕ್ರಿಯಾತ್ಮಕ ನಲ್ಲಿ ಸಂಪರ್ಕಮತ್ತು ಒಎಚ್‌ಟಿ ಕಾಮಗಾರಿಗೆ ಚಾಲನೆ ನೀಡಿದರು.
ತಾಪಂ ಇಒ ಕೆ.ಜಿ. ಕುಮಾರ್, ಆರಾಧನಾ ಸಮಿತಿ ಸದಸ್ಯೆ ವಸುಂಧರಾ ಭಟ್, ಪ್ರಮುಖರಾದ ಭೋಗೇಶ್ ಶಿಗ್ಗಾ, ಶಿವಕುಮಾರ ಕಡಸೂರು, ಈಶ್ವರ ಚನ್ನಪಟ್ಟಣ, ಪರಮೇಶ್ವರ ಮಣ್ಣತ್ತಿ, ಚಂದ್ರಪ್ಪ ಜೋಳದಗುಡ್ಡೆ, ತೆಲಗುಂದ್ಲಿ ಗ್ರಾಪಂ ಅಧ್ಯಕ್ಷ ರಾಕೇಶ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜಪ್ಪ, ತಿರುಪತಿ ಬಾಡದಬೈಲು, ಉಮೇಶ ಗುಂಜನೂರು, ಪ್ರಶಾಂತ್ ಶೇಟ್, ಪಾಂಡುರಂಗ ಸೊರಬ, ಪಿಡಬುÉÂಡಿ ಎಇಇ ಉಮಾನಾಯ್ಕ, ಜಿಪಂ ಎಇಇ ಯಶೋಧರ, ದಂಡಾವತಿ ಜಲಾಶಯ ಯೋಜನಾ ವಿಭಾಗದ ಎಇಇ ಶ್ರೀಧರ್, ಎಇಗಳಾದ ಓಂಕಾರ ನಾಯ್ಕ, ಗಣಪತಿ ನಾಯ್ಕ ಇತರರಿದ್ದರು.