Advertisement

ಇ-ಸಂಜೀವಿನಿ ಆ್ಯಪ್‌ ಸದ್ಬಳಕೆ ಮಾಡಿಕೊಳ್ಳಿ

12:49 PM Apr 27, 2021 | Team Udayavani |

ದೇವನಹಳ್ಳಿ: ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಇ-ಸಂಜೀವಿನಿಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದುಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ದೇಶಾದ್ಯಂತ ಕೋವಿಡ್‌-19ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆತುರ್ತು ಆರೋಗ್ಯ ಸಮಸ್ಯೆಗಳಿಗೆರೋಗಿಗಳು ಆಸ್ಪತ್ರೆಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು ಕಷ್ಟವಾಗಿದೆ.ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತು ಇತರೆ ಆರೋಗ್ಯ ಸಮಸ್ಯೆಗೆ ಮನೆಯಲ್ಲಿಯೇ ಕುಳಿತು ವೈದ್ಯರಿಂದಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಆ್ಯಪ್‌ ಬಳಸಬಹುದಾಗಿದೆ. ವೈದ್ಯರನ್ನು ಮೊಬೈಲ್‌ನಲ್ಲಿಸಂಪರ್ಕಿಸಲು ತಮ್ಮ ಮೊಬೈಲ್‌ನ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿ,ರಿಜಿಸ್ಟರ್‌ ಆಗಬೇಕು. ನಂತರ ವೆಬ್‌ ವಿಡಿಯೋಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ನಿಮ್ಮ ಖಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ, ಕಾಯಿಲೆಗೆ ಚಿಕಿತ್ಸೆ ಬರೆದು ಕೊಡಲಿದ್ದಾರೆ. ಆ ಮೂಲಕ ಆಸ್ಪತ್ರೆ ಕದ ತಟ್ಟದೇ, ಇದ್ದಲ್ಲಿಯೇರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.

ಕೋವಿಡ್ ಸೋಂಕು ತಡೆಗೆ ಸರ್ಕಾರ ಸಾರ್ವಜನಿಕರಿಗೆ ಮನೆಯಲ್ಲಿ ಸುರಕ್ಷಿತವಾಗಿರಿಎಂದು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯದತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆಪಡೆಯಲು, ಕೇಂದ್ರ ಆರೋಗ್ಯ ಮಂತ್ರಾಲಯ,ರಾಷ್ಟ್ರೀಯ ಟೆಲಿಸಮಾಲೋಚನಾ ಸೇವೆ(ನ್ಯಾಷನಲ್‌ ಟೆಲಿಕನ್ಸಲ್ಟೇಷನ್‌ ಸರ್ವೀಸ್‌) ಎಂಬ ಹೆಸರಿನಲ್ಲಿ ಲಿಂಕ್‌ ಆ್ಯಪ್‌ ಸಿದ್ಧಪಡಿಸಿದೆ ಎಂದಿದ್ದಾರೆ.

ವಿಡಿಯೋಕಾಲ್‌ನಲ್ಲಿಸಂಪರ್ಕಕ್ಕಾಗಿ ರೋಗಿ ಹೆಸರು,ಲಿಂಗ, ವಯಸ್ಸನ್ನು ಮೊಬೈಲ್‌ನಂಬರ್‌, ವಿಳಾಸ ನಮೂದಿಸಿಲಾಗಿನ್‌ ಆಗಬೇಕು. ಈ ವೇಳೆ ಟೋಕನ್‌ನಂಬರ್‌ ಬರಲಿದ್ದು, ಆ ನಂಬರ್‌ ನೀಡಿ ವೈದ್ಯರನ್ನುವಿಡಿಯೋ ಕಾಲ್‌ ಮೂಲಕ ಸಂಪರ್ಕಿಸಬಹುದಾಗಿದೆ. ಈ ಸೇವೆ ದಿನದ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಲಭ್ಯವಿರುತ್ತದೆ. ಒಮ್ಮೆ ನೋಂದಣಿಯಾದ ನಂತರ ಪುನಃನೋಂದಣಿಯಾಗುವ ಅಗತ್ಯವಿಲ್ಲ. ವಿಡಿಯೋಕಾಲ್‌ ಮೂಲಕವೇ ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ, ಚಿಕಿತ್ಸೆಗೆ ಔಷಧ ಬರೆದು ಕೊಡಲಿದ್ದಾರೆ. ಜಿಲ್ಲೆಯ ಜನತೆ ಇ- ಸಂಜೀವಿನಿ ಆ್ಯಪ್‌ ಉಪಯೋಗ ಪಡೆಯಬೇಕೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next