Advertisement

ನೈಜ ವಿಷಯಾಧಾರಿತ ಚುನಾವಣೆ ಮಾಡಿ: ಮತದಾರರಿಗೆ ಪ್ರಿಯಾಂಕಾ ಗಾಂಧಿ ಕರೆ

08:56 AM Apr 03, 2019 | Sathish malya |

ಹೊಸದಿಲ್ಲಿ : ಈ ಬಾರಿಯ ಲೋಕಸಭಾ ಚುನಾವಣೆಯನ್ನು ನೈಜ ವಿಷಯಾಧಾರಿತ ಚುನಾವಣೆಯನ್ನಾಗಿ ಮಾಡುವಂತೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತದಾರರನ್ನು ವಿನಂತಿಸಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾದ ಬೆನ್ನಿಗೇ ಆಕೆ ಈ ಮಾತುಗಳನ್ನು ಹೇಳಿರುವುದು ಗಮನಾರ್ಹವಾಗಿದೆ.

ದೇಶದ ಐದು ಕೋಟಿ ಕಡು ಬಡ ಕುಟುಂಬಗಳಿಗೆ ನ್ಯಾಯ್‌ ಸ್ಕೀಮಿನಡಿ ವರ್ಷಕ್ಕೆ 72,000 ಕೋಟಿ ರೂ. ನಗದು ಕೊಡುವುದು, ಖಾಲಿ ಬಿದ್ದಿರುವ 22 ಲಕ್ಷ ಸರಕಾರಿ ಉದ್ಯೋಗಗಳನ್ನು ತುಂಬುವುದು, ರೈತರಿಗಾಗಿ ಪ್ರತ್ಯೇಕ ಬಜೆಟ್‌ ಮಂಡಿಸುವುದು ಮತ್ತು ಏಕ ರೀತಿಯ ಲಘು ಜಿಎಸ್‌ಟಿ ದರವನ್ನು ನಿಗದಿಸುವುದು – ಇವು ಈ ಬಾರಿಯ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯ ಅಂಶಗಳಾಗಿವೆ.

“ಆದುದರಿಂದ ದೇಶದ ಯುವ ಜನರೇ, ಮೊದಲ ಬಾರಿ ಮತ ಹಾಕುವವರೇ, ದಯವಿಟ್ಟು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಒಮ್ಮೆ ಓದಿ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯನ್ನು ನೈಜ ವಿಷಯಾಧಾರಿತವಾಗಿ ಮಾಡಿ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next